ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ನೌಕರರಿಗೆ ಶೇ 9 ಸಂಬಳ ಹೆಚ್ಚಳ!

By Mahesh
|
Google Oneindia Kannada News

Wipro to give India staffers 9% pay hike
ಮುಂಬಯಿ, ಫೆ.1 : ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋ ಫೆಬ್ರವರಿಯಿಂದ ತನ್ನ ಭಾರತೀಯ ನೌಕರರಿಗೆ ಶೇ.9 ರಷ್ಟು ಸಂಬಳ ಹೆಚ್ಚಿಸಲಿದೆ. ವಿದೇಶಿ ಗ್ರಾಹಕರೊಂದಿಗೆ ವ್ಯವಹರಿಸುವ ನೌಕರರಿಗೂ(ಆನ್ ಸೈಟ್) ಇದು ಅನ್ವಯವಾಗಲಿದೆ. ಈ ವಿಷಯವನ್ನು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದು, ಇದರಿಂದ ಕಂಪೆನಿ ಭರಿಸಬೇಕಾದ ವೆಚ್ಚ ಅಥವಾ ಹೆಚ್ಚಳದ ನಿಖರತೆಯನ್ನು ಸ್ಪಷ್ಟಪಡಿಸಿಲ್ಲ .

ಕಂಪೆನಿಯು ಡಿ.31 ರ ವೇಳೆಗೆ 1,02,746 ನೌಕರರನ್ನು ಹೊಂದಿದ್ದು, ಕಂಪೆನಿಯ ಒಟ್ಟು ಆದಾಯದಲ್ಲಿ ಶೇ.74 ರಷ್ಟು ಆದಾಯ ಮಾಹಿತಿ ತಂತ್ರಜ್ಞಾನ ಸೇವೆಯಿಂದಲೇ ಬರುತ್ತಿದೆ. ಕಂಪೆನಿಯ ಒಟ್ಟು ವೆಚ್ಚದಲ್ಲಿ ಶೇ.50-60ರಷ್ಟು ನೌಕರರ ಸಂಬಳಕ್ಕೆ ವ್ಯಯವಾಗುತ್ತಿದೆ. ಕಳೆದ ವರ್ಷ ಜಾಗತಿಕ ಆರ್ಥಿಕ ಹಿಂಜರಿತದಿಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಸಿಬ್ಬಂದಿ ಕಡಿತದೊಂದಿಗೆ, ಸಂಬಳ ಏರಿಕೆಯನ್ನೂ ಮುಂದೂಡಿದ್ದವು.

ದೇಶದ ಎರಡನೇ ಅತೀ ದೊಡ್ಡ ಸಾಫ್ಟವೇರ್ ಕಂಪೆನಿ ಇನ್ಫೋಸಿಸ್ ಇತ್ತೀಚೆಗೆ ಸಿಬ್ಬಂದಿಗಳಿಗೆ ಶೇ.8 ಸಂಬಳ ಏರಿಕೆ ಮಾಡಿದ್ದು, ಭಡ್ತಿ ಪಡೆದ ನೌಕರರಿಗೆ ಶೇ.12.5 ಸಂಬಳ ಏರಿಕೆ ಮಾಡಿತ್ತು. ಆದರೆ ದೇಶದ ಅತೀ ದೊಡ್ಡ ಸಾಫ್ಟವೇರ್ ಕಂಪೆನಿ ಟಿಸಿಎಸ್ ಇನ್ನೂ ಸಂಬಳ ಏರಿಕೆ ಮಾಡಿಲ್ಲ. ಸಾಮಾನ್ಯವಾಗಿ ವಿಪ್ರೋ ತನ್ನ ದೇಶೀಯ ನೌಕರರಿಗೆ(Off shore) ಅಕ್ಟೋಬರ್‌ನಲ್ಲಿ ಮತ್ತು ದೇಶದ ಹೊರಗೆ ಕೆಲಸ ಮಾಡುವನೌಕರರಿಗೆ(Onsite/abroad) ಜನವರಿ ತಿಂಗಳಿನಲ್ಲಿ ಸಂಬಳ ಏರಿಕೆ ಮಾಡುತ್ತದೆ. 2008ರ ಅಕ್ಟೋಬರ್‌ನಲ್ಲಿ ಕಂಪೆನಿ ನೌಕರರಿಗೆ ಶೇ.7-8 ರಷ್ಟು ಸಂಬಳ ಹೆಚ್ಚಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X