ಶ್ರೀಕೃಷ್ಣ ದೇವರಾಯನಂತೆ ರಾಜ್ಯಭಾರ ಮಾಡಿ
ಹಂಪಿ,
ಜ 28 : ವಿಶ್ವ ಭೂಪಟದಲ್ಲಿ ಹಂಪಿಯನ್ನು ಶಾಶ್ವತವಾಗಿ ಸ್ಮರಿಸುವಂತೆ ಮಾಡಿಹೋದ ಶ್ರೀ ಕೃಷ್ಣ ದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು. ವರ್ಣ ರಂಜಿತ ದೀಪಗಳಿಂದ ಅಕ್ಷರಶ: ಕಣ್ಣು ಕುಕ್ಕುವಂತಿದ್ದ ಕೃಷ್ಣದೇವರಾಯ ವೇದಿಕೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಈ ಇತಿಹಾಸ ಪುರುಷನ ಐತಿಹಾಸಿಕ ಕಾರ್ಯಕ್ರಮ ಉದ್ಘಾಟಿಸಿದರು. ಸಾವಿರಾರು ರಸಿಕರು ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. id="toptextpromo">ಯಡಿಯೂರಪ್ಪ
ಅವರೇ, ಈ ಮಹೋತ್ಸವ ಮಾಡಿದರೆ ಸಾಲದು, ಕೃಷ್ಣ ದೇವರಾಯ ತನ್ನ ಪ್ರಜೆಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದ , ನೋಡಿಕೊಳ್ಳುತ್ತಿದ್ದ, ಕಲೆ ಮತ್ತು ಸಾಹಿತ್ಯಕ್ಕೆ ಎಷ್ಟೆಲ್ಲಾ ಪ್ರೋತ್ಸಾಹ ನೀಡುತ್ತಿದ್ದ, ತನ್ನ ರಾಜ್ಯದ ಗಡಿಯನ್ನು ಹೇಗೆ ರಕ್ಷಿಕೊಳ್ಳುತ್ತಿದ್ದ ಇತ್ಯಾದಿ ಅಂಶಗಳನ್ನು ನೀವೂ ಅನುಸರಿಸಬೇಕು ಎಂದು ಸುಷ್ಮಾ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಪ್ರತಿಕ್ರಿಯಿಸಿದ ಯಡಿಯೂರಪ್ಪ, ಶ್ರೀಕೃಷ್ಣ ದೇವರಾಯನ ಕಾಲದ ಆಡಳಿತವನ್ನು ಮರುಕಳಿಸುವಂಥ ಆಡಳಿತ ನೀಡುತ್ತೇನೆ. ಈ ಕಾರ್ಯಕ್ರಮದ ಉದ್ದೇಶ ಆಡಂಬರ ಮಾಡಬೇಕೆಂದಲ್ಲ . ನಾವು ಇಂಥ ಪ್ರಗತಿಯತ್ತ ಸಾಗುತ್ತೇವೆ ಎಂದು ವಿವರಿಸಲು ಎಂದು ಮಾರ್ಮಿಕವಾಗಿ ನುಡಿದರು. ಹಂಪಿಯಲ್ಲಿ ಅನೈತಿಕ ಚಟುವಟಿಕೆಗಳನ್ನೂ ಹತ್ತಿಕ್ಕಬೇಕಿದೆ. ಈ ಸಂಬಂಧ ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ್ ಗುರೂಜಿ, ಕೇಂದ್ರ ಗೃಹಸಚಿವ ಚಿದಂಬರಂ, ಅರವಿಂದ ಲಿಂಬಾವಳಿ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀ ರಾಮುಲು, ಶಾಸಕ ಆನಂದ್ ಸಿಂಗ್, ನಟ ಸಾಯಿ ಕುಮಾರ್ ಮುಂತಾದವರು ಹಾಜರಿದ್ದರು.











Click it and Unblock the Notifications