ಸಿದ್ದರಾಮಯ್ಯ ಅಹಿಂದ ಸಂಸ್ಥಾಪಕರಲ್ಲ: ವಿಶ್ವನಾಥ್

H Vishwanath
ತುಮಕೂರು, ಜ. 25:ಕಾಂಗ್ರೆಸ್ಸೇ ಅಹಿಂದ ಪಕ್ಷ. ಅಹಿಂದ ಸಂಸ್ಥಾಪಕರು ಸಿದ್ದರಾಮಯ್ಯ ಅಲ್ಲ' ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದ್ದಾರೆ. ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಭೂಮಿ ಬಳಗ ಆಯೋಜಿಸಿದ್ದ ಮತ ಸಂತೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಂವಾದದಲ್ಲಿ ಅವರು ಮಾತನಾಡಿದರು.

ಸಭಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿಯಾವ ಪಕ್ಷ ಜಾತ್ಯತೀತ ತತ್ತ್ವ ಪಾಲಿಸುತ್ತದೋ ಅದೇ ಅಹಿಂದ.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಹಿಂದ ಸ್ಥಾಪಕ
ರಲ್ಲ. ಡಾ.ದ್ವಾರಕನಾಥ್, ಇತರರು ಕೋಲಾರದಲ್ಲಿ ಪ್ರಥಮವಾಗಿ ಅಹಿಂದ ಸ್ಥಾಪಿಸಿದರು. ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು' ಎಂದರು.

ಲೋಕಸಭೆ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ. ಮತದಾರರ ಮನೋಭಾವ ನನ್ನನ್ನು ಮತ ಸಂತೆ' ಪುಸ್ತಕ ಬರೆಯಲು ಪ್ರೇರೇಪಿಸಿತು. ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ 25 ಸ್ಥಾನ ಗಳಿಗೆ 1000 ಕೋಟಿ ಗೂ. ಹೆಚ್ಚು ಹಣ ವ್ಯಯವಾಗಿದೆ. ಆಯ್ಕೆಯಾಗಿರುವವರ ಪೈಕಿ ಕೆಲವರನ್ನು ಬಿಟ್ಟರೆ ಉಳಿದವರೆಲ್ಲರೂ ಅವರ ವೃತ್ತಿ ಕ್ಷೇತ್ರದ ಅಭಿವೃದ್ಧಿಗಾಗಿಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ' ಎಂದುದೂರಿದರು.

ವಿಕ ಸಂಪಾದಕರು ಪ್ರೇರಣೆ: ನನ್ನ ಹಳ್ಳಿ ಹಕ್ಕಿಯ ಹಾಡು' ಪುಸ್ತಕ ಬರೆಯಲು ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ್ ಭಟ್ ಅವರೇ ಪ್ರೇರಣೆ. ಒಮ್ಮೆ ಅವರೊಡನೆ ಹಳೆಯ ರಾಜಕೀಯ ನೆನಪನ್ನು ಹಂಚಿಕೊಳ್ಳುತ್ತಿದ್ದಾಗ ಎಲ್ಲವನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಎಂದು ಸಲಹೆ ಮಾಡಿದ್ದರು. ಅನಂತರ 3 ತಿಂಗಳ ಬಳಿಕ ಮತ್ತೆ ಸಿಕ್ಕಾಗ ಪುಸ್ತಕ ಬರೆಯುತ್ತಿದ್ದೀರಾ ಎಂದು ಪ್ರಶ್ನಿಸಿದರು. ಅವರ ಸ್ಫೂರ್ತಿಯಿಂದ ನಾನು ಪುಸ್ತಕ ಬರೆಯಲು ಪ್ರಾರಂಭಿಸಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+