ರಾಜೀನಾಮೆ ಹಿಂದೆ ಕೈ, ಕಮಲದ ಹುನ್ನಾರ
ಬೆಂಗಳೂರು,
ಜ. 21 : ಜೆಡಿಎಸ್ ಶಾಸಕರ ಹಠಾತ್ ರಾಜೀನಾಮೆ ಬೆಳವಣಿಗೆಯ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಅಡಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಜನತಾದಳ ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಸದನದಲ್ಲಿ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಇಲ್ಲದೆ ಹೋದರೂ ಜನ ಸಾಮಾನ್ಯರು ಮೆಚ್ಚುವಂತ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಹೀಗಾಗಿ ಎರಡು ಪಕ್ಷಗಳಿಗೂ ಜೆಡಿಎಸ್ ಬಗ್ಗೆ ಭಯವಿದೆ ಎಂದು ಇಂದಿನ ಬೆಳವಣಿಗೆಯಿಂದ ಸಾಬೀತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. id="toptextpromo">ಇಂದು
ರಾಜೀನಾಮೆ ನೀಡಿದ ಈ ನಾಯಕರುಗಳು ಮಾನಸಿಕವಾಗಿ ಸುಮಾರು ಒಂದು ವರ್ಷಗಳ ಹಿಂದೆಯೇ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರವಾಗಿದ್ದರು. ಹಾಗಾಗಿ ಇವರ ರಾಜೀನಾಮೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿಧಾನ
ಪರಿಷತ್ ನ ಪ್ರತಿಪಕ್ಷದ ಸ್ಥಾನ ಎಲ್ಲಿ ಜೆಡಿಎಸ್ ಪಾಲಾಗುತ್ತದೋ ಎನ್ನುವ ಭಯದಿಂದ ತರಾತುರಿಯಲ್ಲಿ ರಾಜೀನಾಮೆ ಕೊಡಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಕೈ ಜೋಡಿಸಿರುವುದು ಸ್ಪಷ್ಟವಾಗಿದ್ದು ಯಾವುದೇ ಅನುಮಾನ ಉಳಿದಿಲ್ಲ ಎಂದು ಕುಮಾರಸ್ವಾಮಿ ಲೇವಡಿಮಾಡಿದ್ದಾರೆ.











Click it and Unblock the Notifications