ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರೇ ರಾಜಕಾರಣಿಗಳಾಗಿ: ರಾಹುಲ್ ಗಾಂಧಿ

By Mahesh
|
Google Oneindia Kannada News

More youth leaders needed in politics :Rahul Gandhi
ಭೋಪಾಲ್, ಜ.20: ಭಾರತದ ರಾಜಕೀಯ ವ್ಯವಸ್ಥೆಯಿಂದ ರೋಸಿ ಹೋಗಿರುವ ಯುವಕರು ಹಿಂದೇಟು ಹಾಕುತ್ತಿದ್ದರೂ, ಈಗ ಪರಿಸ್ಥಿತಿ ಬದಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾಯದರ್ಶಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಈಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಸೇರಲು ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.

ಮದ್ಯ ಪ್ರದೇಶದ ಮನ್ದ್‌ಸರ್‌ನ ಸಂಸದೆ ಮೀನಾಕ್ಷಿ ನಟರಾಜನ್‌ಸೇರಿದಂತೆ, ಇನ್ನೂ ಅನೇಕರು ಯಾವುದೇ ರಾಜಕೀಯ ಸಂಪರ್ಕವಿಲ್ಲದೆ ರಾಜಕೀಯ ಪ್ರವೇಶ ಮಾಡಿದ್ದಾರೆ.ಪಂಜಾಬ್‌ನ ಕಾಂಗ್ರೆಸ್ ಯುವಕರ ಸಂಘದ ಆಧ್ಯಕ್ಷ ಯಾರೆಂದು ಇಲ್ಲಿಯ ವರೆಗೆ ತಿಳಿದಿಲ್ಲ ಅವರಿಗೆಲ್ಲ ಯಾವುದೇ ರಾಜಕೀಯ ಸಂಪರ್ಕ ಕೂಡ ಇಲ್ಲ ಎಂದ ರಾಹುಲ್, ಯುವ ಸದಸ್ಯರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ತಮಿಳುನಾಡಿನಲ್ಲಿ ಕಾಂಗ್ರೆಸ್ ಯುವ ಸದಸ್ಯರುಗಳ ಸಂಖ್ಯೆ 40,000 ದಿಂದ 15 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.

ಮೌಲಾನಾ ಅಜಾದ್ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳೊಡನೆ ರಾಹುಲ್ ಸಂವಾದ ನಡೆಸಿದರು. ಮದುವೆ ಬಗ್ಗೆ ಪ್ರಶ್ನೆ ಬಂದಾಗ, ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು, ಹೆಚ್ಚೆಚ್ಚು ಯುವಕರಿಗೆ ಪಕ್ಷದ ಬಗ್ಗೆ ಆಕರ್ಷಣೆ ಮೂಡುವಂತಾಗಬೇಕು. ಸದ್ಯಕ್ಕೆ ಇದೇ ನನಗೆ ಆದ್ಯತೆಯ ವಿಷಯವಾಗಿದೆ ಎಂದರು. ಪಾರಂಪರಾಂಗತವಾಗಿ ರಾಜಕೀಯ ಕುಟುಂಬಗಳು ಭಾರತದಲ್ಲಿ ಹೆಚ್ಚು ಕಂಡು ಬಂದರೂ, ಸತ್ವವಿದ್ದರಷ್ಟೇ ಉಳಿಯಲು ಸಾಧ್ಯ. ಪ್ರತ್ಯೇಕ ಬುಂದೆಲ್ ಗಢ್ ರಾಜ್ಯಕ್ಕೆ ನನ್ನ ಅಸಮ್ಮತಿಯಿದೆ. ಆದರೆ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಕೂಡಲೇ ಗಮನಹರಿಸುವ ಅಗತ್ಯವಿದೆ ಎಂದು ರಾಹುಲ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X