ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯರ ಕಾಟದಿಂದ ಕಾಡಾನೆಗಳಿಗೆ ಮುಕ್ತಿ!

By Mahesh
|
Google Oneindia Kannada News

Elephant corridor, a New Year gift to Karnataka jumbos
ಕೊಳ್ಳೇಗಾಲ, ಜ.15:ಇಲ್ಲಿನ ಸುತ್ತಮುತ್ತಲಿನ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ ಕಾಡಾನೆಗಳು ಇನ್ಮುಂದೆ ನಿರ್ಭಿಡೆಯಿಂದ ಜೀವಿಸಬಹುದು. ಸುಮಾರು ಸಾವಿರಕ್ಕೂ ಹೆಚ್ಚು ಆನೆಗಳು ಹಾಗೂ ಇತರೆ ಅರಣ್ಯ ಜೀವಿಗಳು ವಿಶೇಷ ಕಾರಿಡಾರ್ ಅಡಿಯಲ್ಲಿ ಸಂರಕ್ಷಣೆ ಪಡೆಯಲಿವೆ.

ಖಾಸಗಿ ಒಡೆತನದಲ್ಲಿದ್ದ ಕೊಳ್ಳೇಗಾಲ ಕಾರಿಡಾರ್ (ಎದ್ಯಾರಳ್ಳಿ , ಹೊಂಡರ್ ಬಾಳ್ ,ದೊಡ್ಡ ಸಂಪಿಗೆ ಪ್ರದೇಶ) ನಲ್ಲಿ ಹೆಚ್ಚು ವನ್ಯಜೀವಿಗಳು ಕಂಡು ಬರುತ್ತವೆ. ಸುಮಾರು 25 ಎಕರೆ ಈ ಜಾಗವನ್ನು ಸರ್ಕಾರೇತರ ಸಂಸ್ಥೆಯಾದ ವೈಲ್ಡ್ ಫೀಲ್ಡ್ ಟ್ರಸ್ಟ್ ಆಫ್ ಇಂಡಿಯಾ ( WTI) ತನ್ನ ವಶಕ್ಕೆ ತೆಗೆದುಕೊಂಡಿದ್ದು, ಇಂಟರ್ ನ್ಯಾಷನಲ್ ಫಂಡ್ ಫಾರ್ ಅನಿಮಲ್ ವೆಲ್ ಫೇರ್ (IFAW) ಸಹಕಾರದಿಂದ ಈ ಜಾಗವನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡಿದೆ.

ಕೊಳ್ಳೇಗಾಲ ಅರಣ್ಯ ಪ್ರದೇಶದಿಂದ ಬಿಳಿಗಿರಿ ರಂಗನ ಬೆಟ್ಟದ ದೇವಸ್ಥಾನದ ಬೆಟ್ಟ ಗುಡ್ಡ ತಪ್ಪಲಿನ ಪ್ರದೇಶದಲ್ಲಿ ಈ ಕಾರಿಡಾರ್ ಜಾಗ ಸೇರುತ್ತದೆ. ಈ ಅಮೂಲ್ಯ ಜಾಗವನ್ನು ಹಸ್ತಾಂತರ ಮಾಡಿದ್ದು ಆನೆಗಳ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X