ಸಂಸ್ಕೃತ ವಿವಿ ಸ್ಥಾಪನೆ ಏಕೆ, ಪಾಟೀಲ್ ಪುಟ್ಟಪ್ಪ
ಧಾರವಾಡ,
ಜ. 12 : ಜಾತಿಗೊಂದು ಅಧ್ಯಯನ ಪೀಠ. ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸ್ಥಾಪನೆ ಏಕೆ ಎಂದು ಸರಕಾರ ಸ್ಥಾಪಿಸಲು ಉದ್ದೇಶಿಸಿರುವ ಸಂಸ್ಕೃತ ವಿವಿಗೆ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ವಿರೋಧ ವ್ಯಕ್ತಪಡಿಸಿದರು. id="toptextpromo">ಸೋಮವಾರ
ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧಿವಾದಿಗಳು ವಿಚಾರವಾದಿಗಳಾಗಬೇಕು ಎಂದರು. ಬುದ್ಧಿವಾದಿಗಳು ಅನ್ಯಾಯದ ವಿರುದ್ಧ ದನಿ ಎತ್ತುತ್ತಿಲ್ಲ. ಬುದ್ಧಿಜೀವಿಗಳ ಇಂಥ ಮನಸ್ಥಿತಿ ದೇಶ ಇಂದೂ ಅಧೋಗತಿಗೆ ಇಳಿದಿದೆ ಎಂದು ಪುಟ್ಟಪ್ಪ ಅಸಮಾಧಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಎಲ್ಲರೂ
ಕೂಡಿ ಬಾಳುವುದನ್ನು ಕಲಿಯಬೇಕು. ಆಗ ದೇಶದ ಉನ್ನತಿ ಸಾಧ್ಯ. ಒಂದೊಂದು ಜಾತಿಗೆ ಒಂದೊಂದು ಅಧ್ಯಯನ ಪೀಠ ಸರಿಯಲ್ಲ. ಬಹಳ ವರ್ಷಗಳಿಂದ ಬಸವಪೀಠ ಇದ್ದರೂ ಅದು ಏನು ಮಾಡುತ್ತಿದೆ. ಒಂದು ವಿಷಯಕ್ಕೆ ಸಂಸ್ಕತ ವಿವಿ ಸ್ಥಾಪಿಸುವ ಕ್ರಮವನ್ನು ಕೈಬಿಡಬೇಕು ಎಂದು ಅವರು ಸರಕಾರವನ್ನು ಅವರು ಒತ್ತಾಯಿಸಿದರು.











Click it and Unblock the Notifications