Get Updates
Get notified of breaking news, exclusive insights, and must-see stories!

ಗೌಡರನ್ನ ಹುಚ್ಚಾಸ್ಪತ್ರೆಗೆ ಸೇರಿಸಿ, ಕೋರೆ

Prabhakar Kore
ಬೆಳಗಾವಿ, ಮಡಿಕೇರಿ, ಜ. 11 : ರಾಜ್ಯದ ಮುಖ್ಯಮಂತ್ರಿಯಾಗಿರುವ ವ್ಯಕ್ತಿಗೆ ಯಾವ ಮಾತನಾಡಬೇಕು ಎಂಬ ಪರಿಜ್ಞಾನವಿಲ್ಲದೆ ಮಾಜಿ ಪ್ರಧಾನಮಂತ್ರಿ ದೇವೇಗೌಡ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಇವರನ್ನು ಕೂಡಲೇ ಹುಚ್ಚಾಸ್ಪತ್ರೆಗೆ ದಾಖಲಿಸಿ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಲೇವಡಿ ಮಾಡಿದ್ದಾರೆ. ಮೈಸೂರು ಸಂಸದ ಎಚ್ ವಿಶ್ವನಾಥ್, ಸಿಎಂ ವಿರುದ್ಧ ದೇವೇಗೌಡ ಬಳಿಸಿರುವ ಪದ ರಾಜಕೀಯದಲ್ಲೊಂದು ಕಪ್ಪುಚುಕ್ಕೆ. 'ದೇವೇಗೌಡ ಒಬ್ಬ ಸಾಂದರ್ಭಿಕ ಸಮರವೀರ' ಎಂದು ಟೀಕಿಸಿದರು.

ವಿಡಿಯೋ: ಗೌಡರ ವಿರುದ್ಧ ಬಿಜೆಪಿ ಕಾನೂನು ಸಮರ

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬ್ಲಡಿ ಬಾಸ್ಟರ್ಡ್ ಎಂಬ ಪದ ಬಳಕೆ ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಅವರ ಘನತೆಗೆ ಈ ಮಾತು ಸರಿ ಇದೆಯೇ ಎಂದು ಗೌಡರು ಆತ್ಮಾಲೋಕನ ಮಾಡಿಕೊಳ್ಳಲಿ ಎಂದರು. ಸಿಎಂ ವಿರುದ್ದ ಗೌಡರು ಮಾಡಿರುವ ಅವಹೇಳನಕಾರಿ ಟೀಕಿಗೆ ಸಂಬಂಧಿಸಿದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಬಳ್ಳಾರಿಯಲ್ಲಿ ತಮ್ಮ 44ನೇ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ, ಸಿಎಂ ವಿರುದ್ದದ ಹೇಳಿಕೆಗೆ ಸಂಬಂಧಿಸಿದಂತೆ ಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗೌಡರದ್ದು ಹೀನಾಯ ಸಂಸ್ಕೃತಿ ಎಂಬುದು ಈ ಹೇಳಿಕೆಯಿಂದ ಸಾಬೀತಾಗಿದೆ. ಮಾದ್ಯಮದ ಎದುರು ಹೀಗೆ ಮಾತನಾಡುವ ದೇವೇಗೌಡ, ತೆರೆಮರೆಯಲ್ಲಿ ಮಾತನಾಡುವ ರೀತಿ ಹೇಗೆ ಇರಲಿದೆ ಎಂಬುದು ರಾಜ್ಯದ ಜನತೆ ಅರ್ಥವಾಗಿದೆ ಎಂದು ರೆಡ್ಡಿ ಅಸಮಾಧಾವ ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+