ಬಸು ತ್ಯಾಗದಿಂದ ಪ್ರಧಾನಿಯಾದೆ: ದೇವೇಗೌಡ
ಕೊಲ್ಕತ್ತಾ,
ಜ. 8 : ದೇಶದ ಅತ್ಯಂತ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿ ಜ್ಯೋಸು ಬಸು ಅವರ ತ್ಯಾಗದಿಂದಾಗಿ ನಾನು ದೇಶದ ಪ್ರಧಾನಮಂತ್ರಿ ಆಗಲು ಸಾಧ್ಯವಾಯಿತು ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸ್ಮರಿಸಿದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಬಸು ಅವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದರು. id="toptextpromo">ಇಲ್ಲಿನ
ಎಎಂಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಕಳೆದ ಕೆಲ ದಿನಗಳಿಂದ ತುರ್ತು ನಿಗಾ ಘಟಕದಲ್ಲಿ ಕೃತಕ ಉಸಿರಾಟದಲ್ಲಿ ಇರಿಸಲಾಗಿದೆ. ಆಸ್ರತ್ರೆಗೆ ಭೇಟಿ ನೀಡಿದ ದೇವೇಗೌಡ, ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ 24 ವರ್ಷಗಳ ಕಾಲ ಭ್ರಷ್ಟಚಾರ ರಹಿತ ರಾಜ್ಯಭಾರ ಮಾಡಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಇವರ
ಅವಧಿಯಲ್ಲಿ ಭೂಸುಧಾರಣೆ ಕಾಯ್ದೆ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದಿರುವುದು ಪ್ರಮುಖ ಕಾರ್ಯಕ್ರಮಗಳಾಗಿವೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಾನು ಭಾರತದ ಪ್ರಧಾನಮಂತ್ರಿಯಾಗಲು ಜ್ಯೋತಿ ಬಸು ಅವರ ತ್ಯಾಗವೇ ಕಾರಣವಾಗಿದೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಗೌಡರು ಸ್ಮರಿಸಿದರು. ಇಂತಹ ಮಹಾನ್ ನಾಯಕನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಶೀಘ್ರ ಗುಣಮುಖರಾಗಲೆಂದು ಆ ದೇವರಲ್ಲಿ ಕೇಳಿಕೊಳ್ಳುವೆ ಎಂದು ದೇವೇಗೌಡ ಹೇಳಿದರು.











Click it and Unblock the Notifications