ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಎಸ್ಆರ್ ಸಾವಿನ ಹಿಂದೆ ಅಂಬಾನಿಗಳ ಕೈವಾಡ ?

By Staff
|
Google Oneindia Kannada News

Ambani behind YSR chopper crash?
ಹೈದರಾಬಾದ್, ಜ. 8 : ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ ಎಸ್ ರಾಜಶೇಖರರೆಡ್ಡಿ ಅವರ ಅಕಾಲಿಕಕ್ಕೆ ಮರಣಕ್ಕೆ ರಿಲೈಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಚೇರಮನ್ ಮುಖೇಶ್ ಅಂಬಾನಿ ಕಾರಣರೆ ? ಗೊತ್ತಿಲ್ಲ. ಆದರೆ, ಇಂತಹ ಸ್ಫೋಟಕ ಸುದ್ದಿಯೊಂದು ಗುರುವಾರ ಆಂಧ್ರಪ್ರದೇಶ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದೆ ತಡ ಇಡೀ ಆಂಧ್ರಪ್ರದೇಶ ಮುಖೇಶ್ ಅಂಬಾನಿ ವಿರುದ್ಧ ಪ್ರತಿಭಟನೆ ನಡೆಸತೊಡಗಿದೆ.

ಇಂದು ಆಂಧ್ರಪ್ರದೇಶದ ಕೆಲ ಪ್ರದೇಶಗಳಲ್ಲಿ ಬಂದ್ ಆಚರಿಸುತ್ತಿದ್ದರೆ, ಇನ್ನೊಂದು ಕಡೆ ವೈಎಸ್ ಆರ್ ಅಭಿಮಾನಿಗಳು ಮುಖೇಶ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯ ಪೆಟ್ರೋಲ್ ಬಂಕ್ ಗಳು, ಇನ್ಸುರೆನ್ಸ್ ಕಚೇರಿಗಳು, ರಿಟೇಲ್ ಶಾಪ್ ಗಳಿಗೆ ನುಗ್ಗಿ ಧ್ವಂಸಗೊಳಿಸುತ್ತಿದ್ದಾರೆ. ಇನ್ನೊಂದಡೆ ಕರ್ನಾಟಕದಲ್ಲಿ ಅವರ ಅಭಿಮಾನಿಗಳ ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿಯೂ ದಾಂಧಲೆ ನಡೆಸಿದ್ದು, ಇನ್ಸ್ ರೆನ್ಸ್ ಕಚೇರಿ, ಪೆಟ್ರೋಲ್ ಬಂಕ್ ಗಳಿಗೆ 20 ಜನರ ತಂಡ ನುಗ್ಗಿ ಪಿಠೋಪಕರಣಗಳನ್ನು ಧ್ವಂಸಗೊಳಿಸಿದೆ.

ಕೃಷ್ಣ-ಗೋದಾವರಿ ಗ್ಯಾಸ್ ಪೈಪಲೈನ್ ವಿವಾದಕ್ಕೆ ಸಂಬಂಧಿಸಿದಂತೆ ವೈಎಸ್ ಆರ್ ಮತ್ತು ಮುಖೇಶ್ ಅಂಬಾನಿ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ಕಾರಣದಿಂದ ಆರ್ಐಎಲ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ವೈಎಸ್ಆರ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ರಷ್ಯಾ ಮೂಲದ ಇಂಗ್ಲಿಷ್ ವೆಬ್ ಸೈಟ್ ದಿ ಏಕ್ಸೈಲ್ ವರದಿಯೊಂದು ಪ್ರಕಟಿಸಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆಯೇ ಆಂಧ್ರಪ್ರದೇಶದ ವಾಹಿನಿಯೊಂದು ಪ್ರಸಾರ ಮಾಡಿದ್ದರಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ಆರಂಭವಾದವು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ವೈಎಸ್ ಆರ್ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ನಲ್ಲಮಲ್ಲ ದಟ್ಟಾರಣ್ಯಾದಲ್ಲಿ ಅಪಘಾತಕ್ಕೀಡಾಗಿತ್ತು. ರೆಡ್ಡಿ ಸೇರಿ ನಾಲ್ವರು ದುರ್ಮರಣಕ್ಕೆ ಈಡಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X