ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಚುನಾವಣೆ ಸುಪ್ರಿಂಕೋರ್ಟ್ ಅಸ್ತು

By Staff
|
Google Oneindia Kannada News

Supreme Court clears way for BBMP elections
ನವದೆಹಲಿ, ಜ. 7 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆದೆ ಈಗಾಗಲೇ ಘೋಷಿಸಿರುವಂತೆ ಫೆ 21 ರಂದು ಚುನಾವಣೆಗಳನ್ನು ನಡೆಸಬೇಕು ಎಂದು ಸುಪ್ರಿಂಕೋರ್ಟ್ ಬುಧವಾರ ಆದೇಶಿಸಿದೆ. ರಾಜ್ಯ ಸರಕಾರ ಪ್ರಕಟಿಸಿರುವ ಮೀಸಲು ಅಧಿಸೂಚನೆ ಪ್ರಕಾರವೇ ಚುನಾವಣೆಗಳು ನಡೆಯಬೇಕು ಎಂದ ಸಹ ನ್ಯಾಯಲಯ ಹೇಳಿದೆ. ಈ ಮೂಲಕ ನಾಲ್ಕು ವರ್ಷಗಳ ಕಾಲ ನೆನಗುದಿಗೆ ಬಿದ್ದಿದ್ದ ಪಾಲಿಕೆ ಚುನಾವಣೆಗೆ ಹಸಿರು ನಿಶಾನೆ ಸಿಕ್ಕಿದೆ.

ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಿ ವಸುಧಾ ಮತ್ತು ಇತರ ಏಳು ಮಂದಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಬಿಎಸ್ ಚವಾಣ್ ಅವರನ್ನೊಳಗೊಂಡ ಪೀಠವು ಇನ್ನು ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಈಗ ಪ್ರಕಟಿಸಿರುವ ವೇಳಾಪಟ್ಟಿಯಂತೆ ಚುನಾವಣೆ ಪ್ರಕ್ರಿಯೆ ನಡೆಯಬೇಕು. ರಾಜ್ಯ ಸರಕಾರದ ಮೀಸಲು ಕ್ರಮದಲ್ಲಿ ಚುನಾವಣೆ ನಡೆದರೆ ತಪ್ಪಿಲ್ಲ ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ.

ಪಾಲಿಕೆ ಚುನಾವಣೆಯನ್ನು ಪುನಃ ಮುಂದೂಡಲು ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ವಾರ್ಡ್ ನಿಗದಿಪಡಿಸುವ ಬದಲಾಗಿ ಇಡೀ ಬೆಂಗಳೂರು ನಗರವನ್ನೇ ಘಟಕವಾಗಿ ಪರಿಗಣಿಸಿ ಮೀಸಲಾತಿ ನೀತಿ ಅನ್ವಯಿಸುವಂತೆ ನಿರ್ದೇಶನ ನೀಡಲು ಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿತು. ಇಡೀ ಬೆಂಗಳೂರು ನಗರವನ್ನು ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನೀಡಬೇಕು ಎಂಬ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X