ರಾಜಕೀಯ ಅಸ್ಥಿರತೆ ಖಚಿತ, ಕೋಡಿಮಠ ಭವಿಷ್ಯ

ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 2010ರಲ್ಲಿ ಆಂಗ್ಲ ಸಂವತ್ಸರ ಗ್ರಹಣದಿಂದಲೇ ಆರಂಭವಾಗಿದ್ದು, ಪ್ರಕೃತಿ ವಿಕೋಪ, ಕಾಯಿಲೆ ಹೆಚ್ಚಳ, ರಾಜಕೀಯ ಅಸ್ಥಿರತೆ, ದೊಡ್ಡನಗರ ಹಾಗೂ ಅರಸೊತ್ತಿಗೆ ಆಪತ್ತು ಬಂದೊದಗುವುದು ಎಂದು ಹೇಳಿದರು.
ಈ ಸಮಸ್ಯೆಗಳು ಹಿಂದಿನ ಕಾಲದಿಂದಲೂ ಬಂದಿವೆ. ಆಗ ರಾಜರು ತಮ್ಮ ಗುರುವಿನ ಮಾರ್ಗದರ್ಶನದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಈಗಿರುವ ರಾಜಕೀಯ ನಾಯಕರಿಗೆ ಗುರು ಇಲ್ಲ, ಗುರಿನೂ ಇಲ್ಲ ಎಂದು ಟೀಕಿಸಿದರಲ್ಲದೇ, ರಾಜ ಗುರುತ್ವವನ್ನಾದರೂ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ರಾಜ್ಯ ರಾಜಕೀಯ ಭವಿಷ್ಯ ಅಸ್ಥಿರತೆಯಲ್ಲಿರುತ್ತದೆ ಎಂದು ಮೊದಲೇ ಹೇಳಿದ್ದೆ, ಅದನ್ನು ಸರಿಪಡಿಸಿಕೊಳ್ಳುತ್ತ ಮುನ್ನಡೆದಿದ್ದಾರೆ ಅಷ್ಟೆ ಎಂದು ಶ್ರೀಗಳು ನುಡಿದರು.












Click it and Unblock the Notifications