ಚುಟುಕು ಬ್ರಹ್ಮ ಡಾ. ದಿನಕರ ದೇಸಾಯಿ ಶತಮಾನೋತ್ಸವ
ಬೆಂಗಳೂರು,
ಜ.3: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನವರಿ 6 ರಂದು ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಬೆಳಿಗ್ಗೆ 10.30 ಗಂಟೆಯಿಂದ ಡಾ ದಿನಕರ ದೇಸಾಯಿಯವರ ಶತಮಾನೋತ್ಸವ ಸಮಾರಂಭವನ್ನು ಏರ್ಪಡಿಸಿದೆ. id="toptextpromo">ಹೆಸರಾಂತ
ಕಲಾವಿದ ಅಜಯ್ ವಾರಿಯರ್ ಅವರ ತಂಡದಿಂದ ಕನ್ನಡ ಗೀತೆ/ನಾಡಗೀತೆಯಿಂದ ಸಮಾರಂಭವು ಆರಂಭವಾಗುತ್ತದೆ. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಆರ್. ಕೆ. ನಲ್ಲೂರು ಪ್ರಸಾದ್ ಅವರು ಶತಮಾನೋತ್ಸವವನ್ನು ಉದ್ಫಾಟಿಸಲಿದ್ದು, ಹೆಸರಾಂತ ಸಾಹಿತಿಗಳಾದ ಪ್ರೊ ಸಾ.ಶಿ. ಮರುಳಯ್ಯನವರು ಅಧ್ಯಕ್ಷತೆ ವಹಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಧ್ಯಾಹ್ನ
12.30 ಗಂಟೆಗೆ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ ಎಸ್. ಜಿ. ಸಿದ್ಧರಾಮಯ್ಯ ಅವರು ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ ಜರಗನಹಳ್ಳಿ ಶಿವಶಂಕರ್ ಅವರು "ಡಾ ದಿನಕರ ದೇಸಾಯಿ ಬದುಕು ಬರಹ ಸಾಮರಸ್ಯ" ಕುರಿತು ಹಾಗೂ ಡಿ.ವಿ. ಬಡಿಗೇರ್ ಅವರು"ಡಾ ದಿನಕರ ದೇಸಾಯಿ ಅವರ ಚುಟುಕುಗಳು" ಕುರಿತು ಮಾತನಾಡಲಿದ್ದಾರೆ.











Click it and Unblock the Notifications