ಕೇರಳದ ದೇವಾಲಯಗಳಲ್ಲಿ ಸಿಎಂ ಪೂಜೆ
ಬೆಂಗಳೂರು,
ಡಿ.26: ಭಿನ್ನಮತದ ಬೇಗುದಿಯಲ್ಲಿ ಬೇಯುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ಕೇರಳಕ್ಕೆ ಭೇಟಿ ನೀಡಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಒಂಚೂರು ರಿಲ್ಯಾಕ್ಸ್ ಆದರು. ಕೇರಳದ ಕಣ್ಣೂರು ಬಳಿಯ ಭಗವತಿ ಅಮ್ಮ ದೇವಾಲಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. id="toptextpromo">ಇದೇ
ಸಂದರ್ಭದಲ್ಲಿ ಕಣ್ಣೂರು ಬಳಿಯ ಭಗವತಿ ಅಮ್ಮನ ದೇವಾಲಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅನ್ನಪೂರ್ಣ ಛತ್ರವನ್ನು ಯಡಿಯೂರಪ್ಪ ಉದ್ಘಾಟಿಸಿದರು.ನಂತರ ಅವರು ತಿರುವನಂತಪುರಂನ ರಾಜರಾಜೇಶ್ವರಿ ದೇವಾಲಯ ಹಾಗೂ ವೇಳಂನ ಮಹಾಗಣತಿ ದೇವಾಲಯದಲ್ಲೂ ಪೂಜೆ ಸಲ್ಲಿಸಿದರು. id='are-slot-1' class='oiad oi-axt oiadv'> id='top-searched-articles'> ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುಂಚಿನಿಂದಲೂ ಯಡಿಯೂರಪ್ಪ ಕಣ್ಣೂರು ಬಳಿಯ ಭಗವತಿ ಅಮ್ಮನ ದೇವಾಲಯಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಅನ್ನಪೂರ್ಣ ಛತ್ರ ಉದ್ಘಾಟನೆಗೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ತಾವು ಇಲ್ಲಿಗೆ ಆಗಮಿಸಿದ್ದಾಗಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications