ಸುನಾಮಿ ಕರಾಳ ದಿನಕ್ಕೆ ಐದು ವರ್ಷಗಳು

Asia recalls 'killer' waves, prays
ಹೈದರಾಬಾದ್, ಡಿ.26: ಮಾನವ ಇತಿಹಾಸದಲ್ಲಿ ದಾಖಲಾದ ಕರಾಳ ದಿನ 2004ರ ಡಿಸೆಂಬರ್ 26. ಇಂಡೋನೇಷಿಯಾ ಸಮುದ್ರ ಗರ್ಭದಲ್ಲಿ ಉಂಟಾದ ಭೂಕಂಪನ ಸುನಾಮಿಗೆ ಕಾರಣವಾಗಿ ಇಂಡೋನೇಷಿಯಾ, ಥೈಲ್ಯಾಂಡ್, ಭಾರತ, ಶ್ರೀಲಂಕಾ... ಮುಂತಾದ ದೇಶಗಳಿಗೆ ಊಹೆಗೂ ನಿಲುಕದ ನಷ್ಟವನ್ನು ತಂದೊಡ್ಡಿತ್ತು. ಈ ಪ್ರಾಕೃತಿಕ ವಿಕೋಪ ಸಂಭವಿಸಿ ಇಂದಿಗೆ ಐದು ವರ್ಷಗಳು ತುಂಬುತ್ತವೆ.

ನಮ್ಮ ದೇಶದ ಸಮುದ್ರ ತೀರ ಪ್ರದೇಶಗಳಲ್ಲಿನ ಅಂಡಮಾನ್ ನಿಕೋಬಾರ್ ದ್ವೀಪಗಳು, ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ, ಕೇರಳ ತೀರ ಪ್ರದೇಶಗಳನ್ನು ಒಮ್ಮೆಲೆ ಸಮುದ್ರ ಆಪೋಶನ ತೆಗೆದುಕೊಂಡಿತ್ತು. ಸುನಾಮಿ ಅಬ್ಬರಕ್ಕೆ ತೀರ ಪ್ರದೇಶಗಳಲ್ಲಿನ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಸಾವಿರಾರು ಮಂದಿ ಅನಾಥರಾದರು.

ತೀರ ಪ್ರದೇಶಗಳಲ್ಲಿನ ಜನ ಮನೆಮಠ ಕಳೆದುಕೊಂಡು ನಿರ್ಗತಿಕರಾದರು. ಅನಾಥರಾದವರಿಗೆ ಸರಕಾರದ ಪರಿಹಾರ ಲಭಿಸಿದ್ದು ಮಾತ್ರ ಅಷ್ಟಕ್ಕಷ್ಟೆ. ಮೀನುಗಾರ ಕುಟುಂಬಗಳಿಗೆ ಇಂದಿಗೂ ಸರಕಾರದ ಪರಿಹಾರ ಹಣ ಸಿಕ್ಕಿಲ್ಲ ಎಂಬುದು ಶೋಚನೀಯ ಸಂಗತಿ.

ಸುನಾಮಿ ಅಬ್ಬರಕ್ಕೆ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಒಟ್ಟು 230,000 ಮಂದಿ ಬಲಿಯಾದರು. ಇಂಡೋನೇಷಿಯಾ ಸಮುದ್ರ ಗರ್ಭದಲ್ಲಿ ಉಂಟಾದ ಭೂಕಂಪನ ಸುನಾಮಿಗೆ ಕಾರಣವಾಗಿತ್ತು. ಸುನಾಮಿ ವೇಳೆ ಬಿಡುಗಡೆಯಾದ ಶಕ್ತಿ ಹಿರೋಶಿಮಾ ಮೇಲೆ ಅಣುಬಾಂಬ್ ಸ್ಫೋಟಿಸಿದ್ದಕ್ಕಿಂತಲೂ 550 ದಶಲಕ್ಷದಷ್ಟು ಹೆಚ್ಚಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+