ಕ್ರಿಸ್ಮಸ್ ಪ್ರಯುಕ್ತ ತೆಲಂಗಾಣ ಬಂದ್ ಇಲ್ಲ
ಹೈದರಾಬಾದ್,
ಡಿ 24 : ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವುದಾಗಿ ಮಧ್ಯರಾತ್ರಿ ಘೋಷಿಸಿದ್ದ ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದು, ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿರುವ ಬೆನ್ನಲ್ಲೇ ಹಿಂಸಾಚಾರ ಸ್ಪೋಟಗೊಂಡಿದೆ. ಆದರೆ, ಡಿ. 25 ರ ಕ್ರಿಸ್ ಮಸ್ ಆಚರಣೆಗೆ ಅಡ್ಡಿ ಆಗುವುದನ್ನು ತಪ್ಪಿಸಲು ನಾಳೆ ನಡೆಯಬೇಕಿದ್ದ ಮೆರವಣಿಗೆ ಹಾಗೂ ತೆಲಂಗಾಣ ಬಂದ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಟಿಆರ್ಎಸ್ ಪಕ್ಷದ ವಕ್ತಾರರು ಹೇಳಿದ್ದಾರೆ. id="toptextpromo">ಲಕ್ಷ
ಜನರ ಬಲಿದಾನವಾದರು ನಾವು ಈ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ, ಹೈದರಾಬಾದ್ ನಗರವನ್ನು ರಾಜಧಾನಿಯಾಗಿರಿಸಿ ಪ್ರತ್ಯೇಕ ರಾಜ್ಯ ರಚಿಸಿಲ್ಲವಾದರೆ ರಕ್ತಪಾತವಾದಿತು ಎಂದು ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರ ರಾವ್ ಸರಕಾರವನ್ನು ಎಚ್ಚರಿಸಿದ್ದಾರೆ. ಸಾವಿರಾರು ಮಂದಿ 'ಜೈ ತೆಲಂಗಾಣ' ಘೋಷಣೆ ಕೂಗುತ್ತಾ ರಸ್ತೆ ತಡೆ, ಕಲ್ಲು ತೂರಾಟ ನಡೆಸುತ್ತಿದ್ದಾರೆ ಮತ್ತು 9ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. id='are-slot-1' class='oiad oi-axt oiadv'> id='top-searched-articles'>ತೆಲಂಗಾಣ
ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿದ್ಯಮಾನಗಳು ನಡೆದಿದ್ದು ತಮ್ಮದೇ ಸರಕಾರವನ್ನು ನಿಂದಿಸುತ್ತಾ ತೆಲಂಗಾಣ ವ್ಯಾಪ್ತಿಯ 12 ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ್ದು ಈ ಬಿಕ್ಕಟ್ಟಿಗೆ ವೈಎಸ್ಆರ್ ಪುತ್ರ ಜಗನ್ಮೋಹನ್ ರೆಡ್ಡಿ ಕಾರಣ ಎನ್ನುವ ಗಂಭೀರ ಆರೋಪ ಹೊರಿಸಿದ್ದಾರೆ. ಇತ್ತ, ಚಂದ್ರಶೇಖರ ರಾವ್ ಮತ್ತು ಪಕ್ಷದ ಇನ್ನೊಬ್ಬ ಸಂಸದ ರಾಜೀನಾಮೆ ಪತ್ರವನ್ನು ಸ್ಪೀಕರ್ ಮೀರಾ ಕುಮಾರ್ ಗೆ ರವಾನಿಸಿದ್ದಾರೆ. 29 ಟಿಆರ್ಎಸ್ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.











Click it and Unblock the Notifications