ನಗರದಲ್ಲಿ ಕಟೌಟ್ ಹಾವಳಿಗೆ ಕಡಿವಾಣ

ಯಾರದೇ ಹುಟ್ಟುಹಬ್ಬವಿರಲಿ, ಯಾರೋ ಸತ್ತದ್ದಿರಲಿ, ಹಬ್ಬಹರಿದಿನಗಳ ಶುಭಾಶಯವಿರಲಿ, ಜಾತ್ರಿ ಜಾಗರಣೆಯಿರಲಿ, ರಾಜಕೀಯ ಸಮಾವೇಶವಿರಲಿ, ಯಾವುದೇ ರಾಜಕಾರಣಿ ಬರಲಿ ಹೋಗಲಿ ಕಟೌಟುಗಳು, ಬ್ಯಾನರ್ ಗಳು ನಗರದ ಅಂದವನ್ನು ಹಾಳುಗೆಡವಿವೆ.
ಶೂನ್ಯ ವೇಳೆಯಲ್ಲಿ ಜೆಡಿಎಸ್ ನಾಯಕ ಎಂಸಿ ನಾಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸುರೇಶಕುಮಾರ್, ಬಸವೇಶ್ವರ ವೃತ್ತ, ವಿಧಾನಸೌಧ, ಶಾಸಕರ ಭವನ, ಹೈಕೋರ್ಟ್ ವ್ಯಾಪ್ತಿಯಲ್ಲಿ ಈ ಹಾವಳಿ ಇಲ್ಲದಂತೆ ಮಾಡಲಾಗುವುದು. ನಗರದ ಎಲ್ಲೆಡೆಯಲ್ಲಿಯೂ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ವಿಧಾನಸೌಧ ಮತ್ತು ಶಾಸಕರ ಭವನದ ಸುತ್ತಮುತ್ತ ಇರುವ ಎಲ್ಲಾ ಬ್ಯಾನರ್ ಗಳನ್ನೂ ಕೂಡಲೇ ತೆರವುಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ನಿಷೇಧ ಉಲ್ಲಂಘಿಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications