ಕತ್ತಲಲ್ಲಿ ಮುಳುಗಿದ ಉತ್ತರ ಕರ್ನಾಟಕ
ರಾಯಚೂರು
ಡಿ 22 : ರಾಜ್ಯದ ವಿದ್ಯುತ್ ಬೇಡಿಕೆಯಲ್ಲಿ ಶೇ. 38 ರಷ್ಟು ವಿದ್ಯುತ್ ಉತ್ಪಾದಿಸಿ ಕೊಡುತ್ತಿದ್ದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದ ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸೋಮವಾರದಿಂದ (ಡಿ 21) ಸ್ಥಗಿತಗೊಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಇನ್ನೆರಡು ದಿನ ತೀವ್ರ ವಿದ್ಯುತ್ ಸಮಸ್ಯೆ ಎದುರಾಗುವ ಭೀತಿಯಿದೆ. id="toptextpromo">ಒಟ್ಟು
ಏಳು ಘಟಕಗಳಲ್ಲಿ ಒಂದು ಘಟಕದ ವಾರ್ಷಿಕ ದುರಸ್ಥಿ ನಡೆದಿದ್ದು , ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತಿತ್ತು . ವಿದ್ಯುತ್ ಸ್ಥಾವರಕ್ಕೆ ಸಂಬಂಧಪಟ್ಟ ಗ್ರಿಡ್ ಗಳಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿದ್ದು ಬ್ರೇಕರ್ ಗಳು ಹಠಾತ್ ಸುಟ್ಟುಹೋಗಿದ್ದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಆರ್ಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿದ್ಯುತ್
ಉತ್ಪಾದನೆ ಮತ್ತು ಬೇಡಿಕೆ ಇರುವ ವಿದ್ಯುತ್ ಬಗ್ಗೆ ಸ್ಪಷ್ಟವಾಗಿ ಕಂಡುಕೊಳ್ಳುವಲ್ಲಿ ಲೋಪವಾಗಿರುವುದು ತಾಂತ್ರಿಕ ತೊಂದರೆಗೆ ಪ್ರಮುಖ ಕಾರಣ. ಎರಡು ಘಟಕಗಳನ್ನು ಶೀಘ್ರ ದುರಸ್ತಿ ಮಾಡಲಾಗುವುದು ಮತ್ತು ಉಳಿದ ಘಟಕಗಳನ್ನು ಆದಷ್ಟು ಬೇಗ ವಿದ್ಯುತ್ ಉತ್ಪಾದನೆಗೆ ಅಣಿಗೊಳಿಸಲಾಗುವುದು ಎಂದು ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications