ಸಿದ್ಧಿವಿನಾಯಕ ಭಕ್ತರ ಮೇಲೆ ಎಂಎನ್ಎಸ್ ದಾಳಿ
ಮುಂಬೈ,
ಡಿ. 22 : ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಕಾರ್ಯಕರ್ತರು ನಗರದ ಸುಪ್ರಸಿದ್ದ ಸಿದ್ದಿ ವಿನಾಯಕ ದೇವಾಲಯದ ಆವರಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಇಂದು ಬೆಳಿಗ್ಗೆ ಗೂಂಡಾಗಳಂತೆ ದಾಳಿ ನಡೆಸಿದ ಘಟನೆ ನಡೆದಿದೆ. ಆದರೆ, ಇದನ್ನು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. id="toptextpromo">ಅಖಿಲ
ಭಾರತ ಬ್ರಾಹ್ಮಣ ಮಹಾಸಂಘ 'ಯಾರಾದರೂ ರಾಜ್ ಠಾಕ್ರೆಗೆ ಕಪಾಳಮೋಕ್ಷ ಮಾಡಿದರೆ ಅವರಿಗೆ ಒಂದು ಕೋಟಿ ರುಪಾಯಿ ನೀಡುವುದಾಗಿ' ಹೇಳಿಕೆ ನೀಡಿರುವುದು ಎಂಎನ್ಎಸ್ ಕಾರ್ಯಕರ್ತರ ಸಿಟ್ಟಿಗೆ ಕಾರಣವೆಂದು ತಿಳಿದು ಬಂದಿದೆ. ಈ ಮಧ್ಯೆ ಜಲ್ನಾ ಜಿಲ್ಲಾ ನ್ಯಾಯಾಲಯ ರಾಜ್ ಠಾಕ್ರೆ ಅವರನ್ನು ಈವರೆಗೂ ಕೋರ್ಟಿಗೆ ಯಾಕೆ ಹಾಜರುಪಡಿಸಲಿಲ್ಲ ಎಂದು ಪೋಲಿಸರನ್ನು ತರಾಟೆಗೆ ತೆಗೆದುಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಬದ್ನಾಪುರ
ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯ ಠಾಕ್ರೆಗೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಸಂಬಂಧ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ.











Click it and Unblock the Notifications