ರಾಮಕೃಷ್ಣ ಮಠದಲ್ಲೂಕ್ರಿಸ್ತ ಪೂಜೆ
ಬೆಂಗಳೂರು,
ದಿ. 17: ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಡಿ.24 ರ ಸಂಜೆ ವಿಶೇಷ. ಅಲ್ಲಿ ಏಸುಕ್ರಿಸ್ತನ ಫೋಟೋಗೆ ಪುಷ್ಪಾರ್ಚನೆ, ಚಾಮರ, ಆರತಿ, ಶಂಖ, ತೀರ್ಥ ಇತ್ಯಾದಿಗಳ ಮೂಲಕ ಪಂಚೋಪಚಾರ ಪೂಜೆ ಸಲ್ಲಿಸಲಾಗುತ್ತದೆ.ಇದಕ್ಕೆ ಮುನ್ನ ಕ್ರಿಸ್ತನ ಕುರಿತ ಭಜನೆಗಳು, ಕ್ರಿಸ್ತ ಬೋಧನೆಯ ಕುರಿತು ಉಪನ್ಯಾಸ, ಮಠಾಧ್ಯಕ್ಷ ಸ್ವಾಮಿ ಹರ್ಷಾನಂದಜೀ ನೆರವೇರಿಸುತ್ತಾರೆ. id="toptextpromo">ಈ
ಆಚರಣೆಗೊಂದು ವಿಶೇಷ ಹಿನ್ನೆಲೆ ಇದೆ. ವಿವೇಕಾನಂದರು ಸೇರಿದಂತೆ ರಾಮಕೃಷ್ಣರ ಹಲವು ಶಿಷ್ಯರು ಡಿ.24 ರಂದು ಪ.ಬಂಗಾಳದ ಅನಂತಪುರ ಎಂಬಲ್ಲಿ ಸನ್ಯಾಸ ಸ್ವೀಕರಿಸಿದರು. ಆ ಬಳಿಕ ವಿವೇಕಾನಂದರು ಕ್ರಿಸ್ತ ಒಬ್ಬ ಉತ್ತಮ ಸಂತ ಎಂದು ಹೇಳುತ್ತಾರೆ. ಕಾಕತಾಳಿಯವೋ ಎಂಬಂತೆ ವಿವೇಕಾನಂದರು ಸನ್ಯಾಸ ತೆಗೆದುಕೊಂಡ ದಿನ ಕ್ರಿಸ್ತನ ಈವ್ ದಿನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಮಠದಲ್ಲಿ ಈವ್ ದಿನದಂದು ಕ್ರಿಸ್ತನಿಗೆ ಪೂಜೆ ಸಲ್ಲಿಸಲಾಗುತ್ತದೆ. id='are-slot-1' class='oiad oi-axt oiadv'> id='top-searched-articles'>(ಏಜೆನ್ಸ್ಸೀಸ್)












Click it and Unblock the Notifications