NH 234, ಇನ್ನೊಂದು ರಾಷ್ಟ್ರೀಯ ಹೆದ್ದಾರಿ

ಸರಕಾರದ ನಕಾಶೆಯಂತೆ ಮಂಗಳೂರಿನಿಂದ ಆರಂಭಗೊಳ್ಳುವ ಈ ಹೆದ್ದಾರಿ ರಾಜ್ಯದ ಬಿ ಸಿ ರೋಡ್, ಬೆಳ್ತಂಗಡಿ, ಚಾರ್ಮಾಡಿ, ಕೊಟ್ಟಿಗೆಹಾರ, ಮೂಡಿಗೆರೆ, ಬೇಲೂರು, ಹುಳಿಯಾರು, ಶಿರಾ, ಮಧುಗಿರಿ, ಚಿಂತಾಮಣಿ ಮೂಲಕ ಆಂಧ್ರದ ವೆಂಕಟಗಿರಿ, ಕೋಟ ಮಾರ್ಗವಾಗಿ ತಮಿಳುನಾಡಿನ ಪೆರ್ನುಂಪೇಟೆ, ಗುಡಿಲಿತ್ತಂ, ಕಾಟ್ಪಾಡಿ, ವೆಲ್ಲೂರು, ಪುಷ್ಪಗಿರಿ, ಪೋಳುರು, ತಿರುವಣ್ಣಾಮಲೈ ಮೂಲಕ ವಿಳ್ಳುಪುರಂಗೆ ಸಂಪರ್ಕಿಸಲಿದೆ.
ಈ ನೂತನ ಹೆದ್ದಾರಿಯ ಉದ್ದ 780 ಕಿ.ಮೀ ಆಗಿದ್ದು, ಕರ್ನಾಟಕದಲ್ಲಿ 553 ಕಿ.ಮೀ, ಆಂಧ್ರದಲ್ಲಿ 23 ಕಿ.ಮೀ ಮತ್ತು ತಮಿಳುನಾಡಿನಲ್ಲಿ ಸುಮಾರು 204 ಕಿ.ಮೀ ಹಾದುಹೋಗಲಿದೆ. ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಗಳ ಹಸ್ತಾಂತರಕ್ಕೆ ಕೇಂದ್ರ ಸರಕಾರ ಸೂಚನೆ ನೀಡಿದ್ದು, ಹಸ್ತಾಂತರ ಬಳಿಕ ಹೆದ್ದಾರಿಯ ನಿರ್ಮಾಣ ವೆಚ್ಚಗಳ ಪಟ್ಟಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ
(ಏಜೆನ್ಸೀಸ್)












Click it and Unblock the Notifications