ಗಣಕೀಕೃತ ರಹದಾರಿಗೆ ಅಶೋಕ್ ಚಾಲನೆ

ಗಣಕೀಕೃತ ರಹದಾರಿ ನೀಡುವ ವ್ಯವಸ್ಥೆಯಿಂದಾಗಿ ನಕಲಿ ಪರ್ಮಿಟ್‌ಗಳಿಗೆ ಕಡಿವಾಣ ಹಾಕಲು, ರಾಜ್ಯಕ್ಕೆ ಬರುವ ಮತ್ತು ರಾಜ್ಯದಿಂದ ಹೊರಕ್ಕೆ ಹೋಗುವ ವಾಹನಗಳ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ ಎಂದರು. ದೇಶದಲ್ಲಿ ಮೊದಲನೆ ಬಾರಿಗೆ ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತಿದೆ.
ಇನ್ನು ಮುಂದೆ ತೆರಿಗೆ ಪಾವತಿಯನ್ನು ಎಲೆಕ್ಟ್ರಾನಿಕ್ ಪೇಮೆಂಟ್ ವ್ಯವಸ್ಥೆ ಮೂಲಕ ಮಾಡಲಾಗುವುದು. ಸಾರಿಗೆ ಪ್ರಾಧಿಕಾರದ ಕಛೇರಿಗಳು ಕಾಗದ ರಹಿತ ಕಛೇರಿಗಳಾಗುತ್ತಿವೆ. ಇದರಿಂದಾಗಿ ಸಾರಿಗೆ ಇಲಾಖೆಯಲ್ಲಿ ಪಾರದರ್ಶಕತೆಯನ್ನು ತರಲು ಅನುಕೂಲವಾಗಲಿದೆ ಎಂದು ಸಚಿವರ ತಿಳಿಸಿದರು. ಇತ್ತೀಚೆಗೆ ಕೇಂದ್ರ ನಗರಾಭಿವೃದ್ಧಿ ಸಾರಿಗೆ ಮತ್ತು ಸಾರಿಗೆ ಸಚಿವರುಗಳನ್ನು ಭೇಟಿ ಮಾಡಿದಾಗ ಸಚಿವರುಗಳು ಡ್ರೈವಿಂಗ್ ಟ್ರ್ಯಾಕ್‌ಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿರುವರೆಂದು ಅವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications