ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಜಾ ವಿಧಿವಿಧಾನಗಳಿಗೆ ವಾರ್ಷಿಕ ಭತ್ಯೆ ಹೆಚ್ಚಳ

By Staff
|
Google Oneindia Kannada News

 Puja allowance for temples hiked after decades
ಬೆಂಗಳೂರು, ಡಿ 12 : ಸುಮಾರು 40 ವರ್ಷಗಳ ನಂತರ ದೇವಾಲಯಗಳಿಗೆ ದೈನಂದಿನ ಪೂಜಾ ವಿಧಿವಿಧಾನಗಳಿಗೆ ನೀಡುವ ವಾರ್ಷಿಕ ಭತ್ಯೆಯಲ್ಲಿ ಸರಕಾರ ಶೇ. 200ರಷ್ಟು ಹೆಚ್ಚಿಸಿದೆ. ರೂಪಾಯಿ 6,000 ರಂತೆ ರಾಜ್ಯದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 3,600 ದೇವಾಲಯಗಳಿಗೆ ಈ ಭತ್ಯೆಯನ್ನು ನೀಡಲಾಗುವುದು ಎಂದು ಮುಜರಾಯಿ ಸಚಿವ ವಿಎಸ್ ಆಚಾರ್ಯ ಹೇಳಿಕೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿರುವ ದೇವಾಲಯಗಳನ್ನು ಗಮನದಲ್ಲಿಟ್ಟುಕೊಂಡು 1970ರಲ್ಲಿ ದೈನಂದಿನ ಪೂಜೆಗಳಿಗೆ ವಾರ್ಷಿಕವಾಗಿ ಭತ್ಯೆ ನೀಡಲು ಸರಕಾರ ಆರಂಭಿಸಿತ್ತು. ಭತ್ಯೆಯನ್ನು ಹೆಚ್ಚಿಸಬೇಕೆಂದು ಗ್ರಾಮೀಣ ಪ್ರದೇಶದಲ್ಲಿರುವ ದೇವಲಾಯಗಳ ಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಯಡಿಯೂರಪ್ಪ, ವಾರ್ಷಿಕ ರೂಪಾಯಿ 12,000 ನೀಡುವಂತೆ ಹಣಕಾಸು ಇಲಾಖೆಗೆ ನಿರ್ದೇಶಿಸಿದ್ದರು. ಆದರೆ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಿರದ ಕಾರಣ 6000 ರೂಪಾಯಿ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X