ಹೊತ್ತಿ ಉರಿಯುತ್ತಿರುವ ಆಂಧ್ರಪ್ರದೇಶ

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ ನಡೆಸಿದ ಹೋರಾಟಕ್ಕೆ ಮಣಿದು ತೆಲಂಗಾಣ ರಾಜ್ಯಕ್ಕೆ ಅನಿವಾರ್ಯವಾಗಿ ಸಮ್ಮತಿಸಿತ್ತು. ಟಿಆರ್ಎಸ್ ಹೋರಾಟ ಕೊನೆಗೊಂಡಿದ್ದು, ಇದೀಗ ರಾಯಲಸೀಮಾ ಮತ್ತು ಕೋಸ್ಟಲ್ ಆಂಧ್ರಪ್ರದೇಶದ ನಾಯಕರು ಪ್ರತ್ಯೇಕ ತೆಲಂಗಾಣಕ್ಕೆ ತೀವ್ರ ವಿರೋಧಿಸಿದ್ದಾರೆ. ತೆಲಂಗಾಣವನ್ನು ಯಾವ ಕಾರಣಕ್ಕೂ ಪ್ರತ್ಯೇಕ ರಾಜ್ಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಇಂದು ಆಂಧ್ರಪ್ರದೇಶ ಬಂದ್ ಆಚರಿಸಲಾಗುತ್ತಿದ್ದು, ಸುಮಾರು 13 ಜಿಲ್ಲೆಗಳಲ್ಲಿ ಬಹುತೇಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು, ಶಾಲಾ ಕಾಲೇಜು, ಸರಕಾರಿ ಕಚೇರಿಗಳು ಬಂದ್ ಮಾಡಿ ಆಚರಿಸಲಾಗುತ್ತಿದೆ. ಅಲ್ಲಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು. 11 ಬಸ್ ಗಳು ಪ್ರತಿಭಟನಾಕಾರರ ಕೋಪಕ್ಕೆ ತುತ್ತಾಗಿವೆ. ಚಿತ್ತೂರು, ಶ್ರೀಕಾಕುಳಂ, ಅನಂತಪುರ ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಾಸಕರ ರಾಜೀನಾಮೆಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿ, ಈವರೆಗೆ ಕಾಂಗ್ರೆಸ್ ನ 57, ಟಿಡಿಪಿಯ 32 ಮತ್ತು ಪ್ರಜಾರಾಜ್ಯಂ ಪಕ್ಷದ 13 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ಪತ್ರವನ್ನು ಸ್ವೀಕರಿಸಿಲ್ಲ. ಶಾಸಕರೊಂದಿಗೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications