ರಾಹುಲ್ ಗಾಂಧಿ ದೇಶದ ಮಾಲೀಕನೆ ?

ಪಕ್ಷ ದ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಅವರು, ಇದು ಮುಸ್ಲಿಮರನ್ನು ಓಲೈಸುವ ಹೇಳಿಕೆ ಇದಾಗಿದೆ. ಇದರಿಂದ ಭಾರತ ಇಸ್ಲಾಮಿಕ್ ದೇಶವಾಗಹಬಹುದು ಎಂದು ಎಚ್ಚರಿಸಿದ್ದಾರೆ. ಕೆಲ ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಒಲೈಸುತ್ತಿರುವುದನ್ನು ನೋಡಿದರೆ ಭಾರತ ಜಾತ್ಯಾತೀತ ದೇಶದಿಂದ ಇಸ್ಲಾಮಿಕ್ ದೇಶವಾಗುವ ದಿನ ದೂರವಿಲ್ಲ ಎಂದು ಠಾಕ್ರೆ ಎಚ್ಚರಿಸಿದ್ದಾರೆ.
ಮುಸ್ಲಿಂ ಸಮುದಾಯ ಮೊದಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಲಿ, ಏಕರೂಪದ ನಾಗರಿಕ ಸಂಹಿತೆ ಮತ್ತು ಕುಟುಂಬ ಯೋಜನೆಯನ್ನು ಅನುಸರಿಸಲಿ. ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಇಮಾಮ್ ಗಳು ವಂದೇ ಮಾತರಂ ವಿರುದ್ದ ಫತ್ವಾ ಯಾಕೆ ಹೊರಡಿಸಿದ್ದಾರೆ. ಮೊದಲು ಅವರು ಇದನ್ನೆಲ್ಲಾ ಅನುಸರಿಸಲಿ ಆಮೇಲೆ ಪ್ರಧಾನಮಂತ್ರಿ ಮುಸ್ಲಿಮರು ಆದರೆ ಶಿವಸೇನೆಯ ವಿರೋಧವಿಲ್ಲ ಎಂದು ಠಾಕ್ರೆ ಹೇಳಿಕೆ ನೀಡಿದ್ದಾರೆ.
ದೇಶವನ್ನಾಳುವ ಸಾಮರ್ಥ್ಯವಿದ್ದರೆ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಅತ್ಯುನ್ನತ ಹುದ್ದೆಯಾಗಿರುವ ಪ್ರಧಾನಮಂತ್ರಿ ಸ್ಥಾನವನ್ನು ಒಬ್ಬ ಮುಸ್ಲಿಂ ನಾಯಕ ಕೂಡಾ ಅಲಂಕರಿಸಬಹುದು ಎಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಲೀಗಢ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹೇಳಿಕೆ ನೀಡಿದ್ದರು.
(ಏಜನ್ಸೀಸ್)











Click it and Unblock the Notifications