ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತ'ದಲ್ಲಿಯೇ ಸಂಗೀತವಿದೆ : ಚಕ್ರವರ್ತಿ ಸೂಲಿಬೆಲೆ

By * ಕೆ.ಆರ್.ಸೋಮನಾಥ್
|
Google Oneindia Kannada News

Chakravarti Soolibele
ಶಿವಮೊಗ್ಗ, ಡಿ. 5 : ದೇಶದಲ್ಲಿ ಬದಲಾವಣೆ ಆಗುವುದಿದ್ದರೆ ಯುವಪೀಳಿಗೆಯಿಂದ ಮಾತ್ರ ಸಾಧ್ಯ. ಮುದಿ ರಾಜಕಾರಣಿಗಳಿಂದಲ್ಲ ಎಂದು ಖ್ಯಾತ ಅಂಕಣಕಾರ ಹಾಗೂ ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕಸ್ತೂರರ್ಬಾ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಂಗೀತಕ್ಕೂ ಭಾರತಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಸಂಗೀತ ಕಲಿಯುತ್ತಾ ಕಲಿಯುತ್ತಾ ಭಾರತೀಯತೆಗೆ ಹತ್ತಿರ ಬರಬಹುದು. ಜೊತೆಗೆ ನಮ್ಮಲ್ಲಿರುವಂತಹ ಕೆಡುಕುಗಳನ್ನು ಹೋಗಲಾಡಿಸಲು ಸಂಗೀತದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಹಳ ಬೇಸರದ ಸಂಗತಿಯೆಂದರೆ ಕನ್ನಡದಲ್ಲಿ ಭಾರತ ಎಂದು ಕರೆಯುತ್ತೇವೆ. ಆದರೆ ಅದೇ ಭಾರತ ದೇಶವನ್ನು ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಕರೆಯುತ್ತಿದ್ದು, ಇದು ಜಗತ್ತಿನ ಕೆಲವು ಜನರಿಗೆ ಭಾರತ ಎಂದು ಕರೆಯಲು ಬರುವುದಿಲ್ಲ ಈ ಕಾರಣದಿಂದಾಗಿಯೇ ಭಾರತ ಎಂಬ ಹೆಸರನ್ನು ಇಂಡಿಯಾ ಎಂದು ಕರೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕಳೆದ ಹಲವು ವರ್ಷಗಳಿಂದಲೂ ಭಾರತ ಎಂಬ ಹೆಸರನ್ನು ಇಂಡಿಯಾ ಎಂದೇ ಕರೆಯುತ್ತಿದ್ದೇವೆ. ಆದರೆ ಭಾರತ ಎಂಬ ಹೆಸರಿನಲ್ಲಿಯೇ ಸಂಗೀತ ಅಡಗಿದೆ. ಭಾ ಎಂದರೆ ಭಾವ, ರ ಎಂದರೆ ರಾಗ, ತ ಎಂದರೆ ತಾಳ ಇಂತಹ ಸುಮಧುರ ಸಂಗೀತ ಭಾರತವಾಗಿದೆ ಎಂದರು.

ನಾವು ಮೂರ್ಖತನದಿಂದ ಹೊರಬರಬೇಕು ಎಂದರೆ ಅದಕ್ಕೆ ಒಳ್ಳೆಯ ಮಾರ್ಗ ಸಂಗೀತ. ಇದರಿಂದ ಆನಂದ ಸಿಗುತ್ತದೆ. ಆದರೆ ನಾವು ಅಂದುಕೊಂಡಂತೆ ಆನಂದವನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಂಗೀತದಿಂದ ಮನಸ್ಸಿಗೆ ಆನಂದ, ಉಲ್ಲಾಸ ಎಲ್ಲವನ್ನೂ ಪಡೆಯಬಹುದಾಗಿದೆ. ಜೊತೆಗೆ ಸಂಗೀತವನ್ನು ಕಲಿಯಬೇಕು. ಸಂಗೀತ ಕೇಳುವ ಮೂಲಕ ಭಾರತಕ್ಕೆ ಹತ್ತಿರವಾಗಬೇಕು ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X