ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಸ್ಸಿ ದಾಳಿ : ಶಂಕಿತ ಉಗ್ರರ ಸೆರೆ

By Staff
|
Google Oneindia Kannada News

ಬೆಂಗಳೂರು, ಡಿ. 3 : ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮೇಲೆ 2005ರಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಬಂಧ ಭದ್ರತಾ ಪಡೆಗಳು ಮಹತ್ವದ ಯಶಸ್ಸು ಸಾಧಿಸಿವೆ. ಈ ದಾಳಿಯಲ್ಲಿ ಪಾಲ್ಗೊಂಡಿದ್ದರೆನ್ನಲಾದ ಕೇರಳ ಮೂಲದವರಾದ ಟಿ.ನಾಜೀರ್ ಮತ್ತು ಶೇಖ್ ಎಂಬುವರನ್ನು ಮೇಘಾಲಯದ ಭಾರತ-ಬಾಂಗ್ಲಾ ಗಡಿಯಲ್ಲಿ ಬುಧವಾರ ಬಂಧಿಸಲಾಗಿದೆ.

ಐಐಎಸ್‌ಸಿ ಮೇಲೆ ದಾಳಿ ಮತ್ತು ಸರಣಿ ಸ್ಫೋಟ ಪ್ರಕರಣದಲ್ಲಿ ಬೇಕಾದ ಉಗ್ರರು ಅಡಗಿರುವ ಬಗ್ಗೆ ಬಾಂಗ್ಲಾದೇಶಕ್ಕೆ ಭಾರತ ಪುರಾವೆ ಒದಗಿಸಿತ್ತು. ಅದರನ್ವಯ ನಾಜೀರ್ ಮತ್ತು ಶೇಖ್ ಎಂಬ ಇಬ್ಬರು ಲಷ್ಕರೆ ಉಗ್ರರನ್ನು ಬಾಂಗ್ಲಾ ಭದ್ರತಾ ಪಡೆಗಳು ಸೆರೆ ಹಿಡಿದು ಭಾರತೀಯ ಗಡಿ ಭದ್ರತಾ ಪಡೆಯ ವಶಕ್ಕೆ ಒಪ್ಪಿಸಿವೆ. ಇವರಿಬ್ಬರನ್ನೂ ವಿಚಾರಣೆಗೆ ಕರೆತರಲು ಕರ್ನಾಟಕ ಪೊಲೀಸರ ತಂಡ ನವದೆಹಲಿಗೆ ತೆರಳಿದೆ.

2005 ಡಿಸೆಂಬರ್ 28 ರಂದು ಪ್ರತಿಷ್ಠಿತ ಭಾರತೀಯ ವಿಜ್ಞಾನ ಭವನದ ಮೇಲೆ ದಾಳಿ ನಡೆಸಿದ್ದ ಉಗ್ರರು ದಿಲ್ಲಿಯ ಐಐಟಿ ನಿವೃತ್ತ ಪ್ರೊಫೆಸರ್ ಎಂ ಸಿ ಪುರಿ ಅವರನ್ನು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದರು. ಮಲಪ್ಪುರಂ ಜಿಲ್ಲೆಯವನಾದ ನಾಜೀರ್ ಮುಸ್ಲಿಂ ಯುವಕರ ತಲೆ ಕೆಡಿಸಿ ಜಿಹಾದ್‌ನಲ್ಲಿ ತೊಡಗಿಸುತ್ತಿದ್ದ. ಮುಸ್ಲಿಮ್ ಯುವಕರ ಮನವೊಲಿಸಿದ ಬಳಿಕ ಅವರನ್ನು ಭಯೋತ್ಪಾದನೆ ತರಬೇತಿಗಾಗಿ ಆತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿಕೊಡುತ್ತಿದ್ದ. ಈ ಸಂಬಂಧ ನಾಜಿರ್ ಬಹಳ ಕಾಲದಿಂದ ಪೊಲೀಸರಿಗೆ ಬೇಕಾಗಿದ್ದ.

ಮೇಘಾಲಯಕ್ಕೆ ಪೊಲೀಸ್ ತಂಡ ಬೆಂಗಳೂರು :
ಲಷ್ಕರೆ ತಯ್ಬಾ ಉಗ್ರರ ಬಂಧನ ದೃಢಪಟ್ಟಿದ್ದು, ಮೇಘಾಲಯಕ್ಕೆ ಪೊಲೀಸ್ ತಂಡ ಕಳುಹಿಸಿಕೊಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಐಜಿಪಿ ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, ಉಗ್ರರ ಬಂಧನವಾಗಿರುವ ಬಗ್ಗೆ ಮೇಘಾಲಯ ಪೊಲೀಸರು ನಮ್ಮನ್ನು ಸಂಪರ್ಕಿಸಿದ್ದಾರೆ. ಈ ಉಗ್ರರ ವಿಚಾರಣೆಗೆ ರಾಜ್ಯ ಪೊಲೀಸ್ ತಂಡ ತೆರಳಲಿದೆ ಎಂದು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X