ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 8,500 ಮಕ್ಕಳಿಗೆ ಎಚ್ ಐವಿ

By Staff
|
Google Oneindia Kannada News

Red ribon
ಬೆಂಗಳೂರು, ಡಿ. 1 : ಆಟ, ಪಾಠ, ಚೆಲ್ಲಾಟಗಳೊಂದಿಗೆ ಸಂಭ್ರಮಿಸಬೇಕಿದ್ದ ರಾಜ್ಯದ 8,500 ಮಕ್ಕಳು ಎಚ್ ಐವಿ ಪೀಡಿತರಾಗಿ ದಿನ ದೂಡುತ್ತಿದ್ದಾರೆ. ತಾವು ಮಾಡದ ತಪ್ಪಿಗೆ, ತಂದೆ ತಾಯಿಗಳಿಂದ ಬಳುವಳಿಯಾಗಿ ಪಡೆದುಕೊಂಡು ಶಿಕ್ಷೆ ಅನುಭವಿಸುತ್ತಿರುವ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಬಿಲ್ ಗೇಟ್ಸ್ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಜಂಟಿಯಾಗಿ ರಾಜ್ಯಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ 18 ತಿಂಗಳಿನಿಂದ 15 ವರ್ಷ ವಯೋಮಾನದ 8,500 ಮಕ್ಕಳು ಎಚ್ ಐವಿ ಬಾಧಿತರಾಗಿರುವುದು ಪತ್ತೆಯಾಗಿದೆ.

ಇದರಲ್ಲಿ 2,700 ಮಕ್ಕಳು ಎಆರ್ ಟಿ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ರಾಜ್ಯದ ಹತ್ತಾರು ಸ್ವಯಂ ಸೇವಾ ಸಂಸ್ಥೆಗಳು ಈ ಮಕ್ಕಳ ಲಾಲನೆ ಪಾಲನೆ ಮಾಡುತ್ತಿವೆ. ಇಡೀ ದೇಶಾದ್ಯಂತ 2,20 ಲಕ್ಷ ಮಕ್ಕಳು ಎಚ್ ಐವಿ ಪೀಡಿತರಾಗಿದ್ದಾರೆ ಎಂಬ ಅಂದಾಜಿಸಲಾಗಿದೆ. ಪ್ರತಿ ಗಂಟೆಗೆ ಸುಮಾರು 30 ಮಕ್ಕಳು ಏಡ್ಸ್ ನಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ವರ್ಷ ದೇಶದಲ್ಲಿ ಎಚ್ ಐವಿ ಪೀಡಿತರಿಗೆ ಜನಿಸುವ ಮಕ್ಕಳ ಸಂಖ್ಯೆ 40 ರಿಂದ 50 ಸಾವಿರ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯದ 164 ಕೇಂದ್ರಗಳಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಈ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 18 ತಿಂಗಳು ಒಳಗಿನ ಮಕ್ಕಳಿಗೆ ಎಚ್ ಐವಿ ಇದೆಯೇ ಎಂದು ಚಿಕ್ಕವಯಸ್ಸಿನಲ್ಲೇ ಪರೀಕ್ಷೆ ನಡೆಸಿ ಪತ್ತೆ ಹಚ್ಚುವುದರಿಂದ ಅವರ ಪೋಷಣೆಗೆ ಹೆಚ್ಚಿನ ಬಲ ಬರಲಿದೆ ಬಿಲ್ ಗೇಟ್ಸ್ ಫೌಂಡೇಷನ್ ಕರ್ನಾಟಕದ ಮುಖ್ಯಸ್ಥರಾಗಿರುವ ಡಾ ಲಲಿತಾ ಹಂದೆ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X