ಬಾಬಾಬುಡನ್ ಗಿರಿಯಲ್ಲಿ ದತ್ತ ಜಯಂತಿಗೆ ಚಾಲನೆ

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಾತೆಯರು ದತ್ತ ಭಜನೆ, ಗಣಪತಿ ಹೋಮಗಳಲ್ಲಿ ಭಾಗವಹಿಸಿ ದತ್ತವಿಗ್ರಹಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಅಗತ್ಯ ಪ್ರಮಾಣದಲ್ಲಿ ಪೊಲೀಸರನ್ನು ಪೀಠಕ್ಕೆ ರವಾನಿಸಲಾಗಿತ್ತಾದರೂ ಭಕ್ತರಿಗಿಂತ ಅವರೇ ಅಧಿಕವಾಗಿದ್ದರು. ಗುಹೆ ದುರಸ್ತಿ ಹಿನ್ನೆಲೆಯಲ್ಲಿ ಪೀಠದ ಆವರಣ ಪ್ರವೇಶ, ದತ್ತ ಪಾದುಕೆ ದರ್ಶನ ನಿರ್ಬಂಧಿಸಲಾಗಿತ್ತು. ಹಿತವಾದ ಹವಾಮಾನ ಕಾರ್ಯಕ್ರಮಕ್ಕೆ ಪೂರಕವಾಗಿತ್ತು. ಇದಕ್ಕೂ ಮೊದಲು ದತ್ತ ಜಯಂತಿ ಮೊದಲ ಚರಣವಾದ ಅನುಸೂಯಾ ಜಯಂತಿಗೆ ಜಿಲ್ಲಾ ಕೇಂದ್ರದಲ್ಲಿ ಚಾಲನೆ ಸಿಕ್ಕಿತು.
ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ನೂರಾರು ವನಿತೆಯರು ದತ್ತ ಅನುಸೂಯಾ ಭಜನೆ ನರವೇರಿಸಿದರು. ಇಂದಿರಾಗಾಂಧಿ ರಸ್ತೆಯಲ್ಲಿ ಸಂಕೀರ್ತನಾ ಯಾತ್ರೆ ನಡೆಸಿ ಗಮನ ಸೆಳೆಯಿತು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications