ರಾಜಾಜಿನಗರ ಸ್ಲಮ್ ಮಾಯ: ಸುರೇಶ್ ಕುಮಾರ್

ಅವರು ಗುರುವಾರ ರಾಜಾಜಿನಗರದ ಇಂದಿರಾ ನಗರ ಕೊಳಚೆ ಪ್ರದೇಶದಲ್ಲಿ 163 ಮನೆಗಳ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಈ ಮನೆಗಳನ್ನು ಲಘುಭಾರ ನಿರ್ಮಾಣ (Light Weight Construction Method)ತಂತ್ರಜ್ಞಾನದ ಮೂಲಕ ನಿರ್ಮಿಸುತ್ತಿದ್ದು ಕರ್ನಾಟಕದಲ್ಲಿ ಇದು ಮೊತ್ತಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಪ್ರತಿಯೊಂದು ಮನೆಗೂ 1.8 ಲಕ್ಷ ರು. ವೆಚ್ಚವಾಗುತ್ತಿದ್ದು, ಇದು ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿ ಜನರಿಗೂ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಪ್ರತಿ ಮನೆಯ ಫಲಾನುಭವಿಯು 21,600ರು.ಗಳನ್ನು ಭರಿಸಬೇಕಾಗಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ 18,000 ರು. ಭರಿಸಬೇಕಾಗುತ್ತದೆ. ಈ ಪ.ಜಾತಿ ಮತ್ತು ಪಂಗಡದ ಜನರು ಭರಿಸಬೇಕಾದ ಹಣವನ್ನು ಬಿಬಿಎಂಪಿ ವತಿಯಿಂದ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications