ಗಿನ್ನಿಸ್ ದಾಖಲೆ ಬರೆದ ರಾಷ್ಟ್ರಪತಿ ಪ್ರತಿಭಾ
ಪುಣೆ,
ನ. 25 : ಭಾರತ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಪ್ರಥಮ ಬಾರಿಗೆ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದರು. ಈ ಮೂಲಕ 74ರ ಹರೆಯದ ಪ್ರತಿಭಾ ಪಾಟೀಲ್ ಸುಮಾರು 30 ನಿಮಿಷಗಳ ಕಾಲ ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಬಾಜನರಾದರು. id="toptextpromo">ಪುಣೆಯ
ಗೋಹೆರಗಾಂವ್ ಯುದ್ಧವಿಮಾನದ ನಿಲ್ದಾಣದಿಂದ ಇಂದು ಬೆಳಗ್ಗೆ ಸ್ಕ್ವಾಂಡ್ರನ್ ಗಳ ಸಮವಸ್ತ್ರ (G-suit) ಧರಿಸಿ ನೆರೆದಿದ್ದ ಜನಸ್ತೋಮದ ಕಡೆಗೆ ಗೆಲುವಿನ ನಗೆಬೀರಿ ಅತ್ಮವಿಶ್ವಾಸದಿಂದ ಸುಖೋಯ್ ವಿಮಾನವೇರಿದ ಪ್ರತಿಭಾ ಪಾಟೀಲ್. ಅರ್ಧ ಗಂಟೆ ಯಶಸ್ವಿ ಹಾರಾಟ ನಡೆಸಿದರು. ವಿಂಗ್ ಕಮಾಂಡರ್ ಎಸ್ ಸಾಜನ್ ಸುಖೋಯ್ ವಿಮಾನ ಯಶಸ್ವಿ ನಡೆಸಿದರು. ಸುಖೋಯ್ ವಿಮಾನ ಗಂಟೆ 800 ಕಿಮೀ ವೇಗದಲ್ಲಿ ಚಲಿಸಲಿದೆ. ಮಾಜಿ ರಾಷ್ಟ್ರಪತಿ ಅಬ್ಧುಲ್ ಕಲಾಂ ಅವರು ಸಹ ಸುಖೋಯ್ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ಮೂಲಕ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಾಷ್ಟ್ರೀಪತಿ ಎಂಬ ಗೌರವಕ್ಕಬ ಪಾತ್ರರಾದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications