ಮುರುಘಾಮಠಕ್ಕೆ ನೂತನ ಪೀಠಾಧ್ಯಕ್ಷ
ಧಾರವಾಡ,
ನ. 24: ವೀರಶೈವರ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಧಾರವಾಡ ಮುರುಘಾಮಠಕ್ಕೆ ನೂತನ ಶ್ರೀಗಳ ಪಟ್ಟಾಧಿಕಾರ ಸೋಮವಾರ ಅದ್ದೂರಿಯಿಂದ ನೆರವೇರಿತು. ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಲ್ಬರ್ಗ ಜಿಲ್ಲೆ ಗುರುಮಿಠಕಲ್ಲಿನ ಶ್ರೀ ಶಾಂತವೀರ ಮುರುಘ ರಾಜೇಂದ್ರ ಶ್ರೀಗಳು ಬಸವಲಿಂಗ ಸ್ವಾಮಿ ಎಂಬ ನೂತನ ನಾಮದೊಂದಿಗೆ ಪೀಠ ಅಲಂಕರಿಸಿದರು. id="toptextpromo">ಚಿತ್ರದುರ್ಗ
ಬೃಹನ್ಮಠದ ಮುರುಘಾಶರಣರು, ಗದಗ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು, ರಾವಂದೂರಿನ ಮೋಕ್ಷಪತಿ ಸ್ವಾಮಿಗಳು, ಅಥಣಿಯ ಚನ್ನಬಸವ ಸ್ವಾಮಿಗಳು, ಹೊಸದುರ್ಗದ ಶಿವಬಸವ ಸ್ವಾಮಿಗಳು, ವೇಮನ ಸ್ವಾಮಿಗಳು ಉಪಸ್ಥಿತರಿದ್ದರು. ನೂತನ ಶ್ರೀಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಿರೀಟ ಧಾರಣೆ, ಬಸವ ಜಲ ಸಿಂಪರಣೆ, ವಿಭೂತಿ-ಲಿಂಗ ಧಾರಣೆ, ಜೋಳಿಗೆ, ವಚನ-ಧರ್ಮ ಗ್ರಂಥ ಧಾರಣೆ ವಿಧಿವಿಧಾನ ಗಳು ನಡೆದವು. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)












Click it and Unblock the Notifications