ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮಾರಾಟ ಜಾಲ ಪತ್ತೆ, ಇಬ್ಬರ ಬಂಧನ

By Staff
|
Google Oneindia Kannada News

BIAL police bust woman selling racket
ಬೆಂಗಳೂರು, ನ. 21 : ಪ್ರೀತಿಯ ನಾಟಕವಾಡಿ ಕೆಲಸ ಕೊಡಿಸುವ ನೆಪವೊಡ್ಡಿ ಮಹಿಳೆಯೊಬ್ಬಳನ್ನು ದುಬೈನ ಶ್ರೀಮಂತನೊಬ್ಬನಿಗೆ ಮಾರಾಟ ಮಾಡಲೆತ್ನಿಸಿದ ಇಬ್ಬರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಇಂದು ಬಂಧಿಸಿದ್ದಾರೆ.

ನಕಲಿ ಪಾಸ್ಪೋರ್ಟ್ ಸೃಷ್ಟಿಸಿ ಸರಸ್ವತಿ ಎಂಬ ಮಹಿಳೆಯನ್ನು ದುಬೈನ ಶ್ರೀಮಂತ ಶೇಕ್ ಎಂಬುವವನಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಲೆತ್ನಿಸಿದ್ದ ಮಂಗಳೂರು ಮೂಲದ ಅಬ್ದುಲ್ ರಜಾಕ್ ಮತ್ತು ಜಾಕಿರ್ ಹುಸೇನ್ ಬಂಧಿತರು.

ಘಟನೆಯ ವಿವರ : ಸರಸ್ವತಿ ಎಂಬ ಮಹಿಳೆಗೆ ದುಬೈನಲ್ಲಿ ಉತ್ತಮ ಸಂಬಳಕ್ಕೆ ಕೆಲಸ ಕೊಡಿಸುವುದಾಗಿ ದುಷ್ಕರ್ಮಿಗಳು ನಂಬಿಸಿದ್ದಾರೆ. ನಹೀಮಾ ಖಾನ್ ಎಂಬುವವರಿಗೆ ಸೇರಿದ್ದ ಪಾಸ್ಪೋರ್ಟಿನಲ್ಲಿ ನಹೀಮಾ ಫೋಟೋ ಬದಲಿಸಿ ಸರಸ್ವತಿ ಚಿತ್ರ ಅಂಟಿಸಿದ್ದಾರೆ. ಮಾರಾಟ ಜಾಲದ ಸುಳಿವರಿತ ಪೊಲೀಸರು ಸರಸ್ವತಿಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಹಿಂದೂ ಆಗಿರುವ ಸರಸ್ವತಿ ಉರ್ದು ಬರದಿರುವುದು ಮತ್ತಷ್ಟು ಸಂಶಯಕ್ಕೆ ಗುರಿಮಾಡಿದೆ. ತೀವ್ರವಾಗಿ ವಿಚಾರಣೆಗೆ ಗುರಿಪಡಿಸಿದಾಗ ಉತ್ತಮ ಸಂಬಳದ ಕೆಲಸ ಸಿಕ್ಕಿದ್ದರಿಂದ ದುಬೈಗೆ ಹೋಗುತ್ತಿರುವುದಾಗಿ ಆಕೆ ಬಾಯಿ ಬಿಟ್ಟಿದ್ದಾಳೆ ಮತ್ತು ಅಬ್ದುಲ್ ಮತ್ತು ಜಾಕಿರ್ ಹೆಸರು ಹೇಳಿದ್ದಾಳೆ.

ಆಕೆ ಕೊಟ್ಟ ಮಾಹಿತಿಯ ಮೇರೆಗೆ ಅಬ್ದುಲ್ ಮತ್ತು ಜಾಕಿರ್ ಅವರನ್ನು ಪೊಲೀಸರು ಬಂಧಿಸಿದಾಗ, ಆಕೆಯನ್ನು ಮಾರಾಟ ಮಾಡುವ ವಿಷಯ ಬಹಿರಂಗವಾಗಿದೆ. ಈ ಮಾರಾಟ ಜಾಲದ ಹಿಂದಿನ ಮುಂಬೈ ಮೂಲದ ವ್ಯಕ್ತಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಅಮಾಯಕಿಯಾಗಿರುವ ಸರಸ್ವತಿಗೆ ತನ್ನನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಇಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X