ಒಮ್ಮತ ಮೂಡದಿದ್ದರೆ ಚುನಾವಣೆ ಎದುರಿಸಿ: ಜೈಟ್ಲಿ

ಈ ಎಲ್ಲ ಬೆಳವಣಿಗೆಗಳಿಂದ ತೀವ್ರ ಬೇಸತ್ತಿರುವ ಅರುಣ್ ಜೈಟ್ಲಿ ಯಾವುದಾದರೂ ಒಂದು ಬಣ ಗುಂಪು ತ್ಯಾಗಕ್ಕೆ ಸಿದ್ಧವಾಗಬೇಕು. ಇಲ್ಲವಾದರೆ ಚುನಾವಣೆ ಅನಿವಾರ್ಯ ಎಂದು ಎರಡೂ ಕಡೆಯವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇಡೀ ದಿನ ಸಂಧಾನ ಸಭೆ ನೆಡೆಸಿದರೂ ಎರಡೂ ಗುಂಪಿನ ಮುಖಂಡರು ಪಟ್ಟು ಸಡಿಸಲಿಲ್ಲ. ಅದೇ ಬಿಗುವು ಮುಂದುವರಿದರೆ ಚುನಾವಣೆ ಒಂದೇ ಉಳಿದಿರುವ ಮಾರ್ಗ ಎಂದು ಜೈಟ್ಲಿ ಖಡಾಖಂಡಿತವಾಗಿ ಹೇಳಿದ್ದಾರೆ.
ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಗುರುವಾರ ರಾತ್ರಿಯೂ ಅರುಣ್ ಜೈಟ್ಲಿ ಅವರನ್ನು ಹೋಟೆಲ್ ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications