ನಿಂದನೆ : ರೆಡ್ಡಿಗಳ ವಿರುದ್ಧ ಗರಂ ಆದ ಸಿಎಂ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಏಳ್ಗೆ ಸಹಿಸದ ಕೆಲ ವ್ಯಕ್ತಿಗಳು ನನ್ನ ವಿರುದ್ದ ಪಿತೂರಿ ಆರಂಭಿಸಿದ್ದಾರೆ ಎಂದು ಹರಿಹಾಯ್ದರು. ಮುಖ್ಯಮಂತ್ರಿ ಪದವಿಗೆ ಗೌರವ ಕೊಡದೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಆ ಬಗ್ಗೆ ನನಗೆ ಅಸಮಾಧಾನವಿದೆ. ಇದನ್ನು ಹೈಕಮಾಂಡ್ ಮುಂದೆ ಇರಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸುವೆ ಎಂದು ಎಚ್ಚರಿಕೆ ನೀಡಿದರು.
ಇಂತಹ ವ್ಯಕ್ತಿಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ಅದ್ಯತೆ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸುವುದು. ಅದು ನಿರಾಂತಕವಾಗಿ ನಡೆಯಲಿದೆ. ನವೆಂಬರ್ 1 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಬುಧವಾರ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲ್ಲೂಕಿನಲ್ಲಿ ಏರ್ಪಡಿಸಲಾಗಿದ್ದ ನವಗ್ರಾಮ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಮುಖ್ಯಮಂತ್ರಿ ಯಡಿಯೂರಪ್ಪ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications