ಯಡಿಯೂರಪ್ಪ ಕುರ್ಚಿಗೆ ಕುತ್ತು ಸಾಧ್ಯತೆ

ಯಡಿಯೂರಪ್ಪ ಬದಲಿಗೆ ವಿಧಾನ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರನ್ನು ಪರ್ಯಾಯ ನಾಯಕತ್ವ ವಹಿಸಿಕೊಳ್ಳುವಂತೆ ಮನವೊಲಿಸಿಕೊಳ್ಳುವ ಕಸರತ್ತು ತೀವ್ರವಾಗಿದ್ದು, ಗಣಿ ಧಣಿಗಳ ಬೆಂಬಲಿಗ ಸಚಿವರು ಹಾಗೂ ಶಾಸಕರಲ್ಲದೆ ಹಿರಿಯ ಸಚಿವರಾದ ಈಶ್ವರಪ್ಪ, ಆರ್ ಅಶೋಕ್ ಅವರೂ ಪ್ರತ್ಯೇಕ ಭೇಟಿ ಮಾಡಿ ಚರ್ಚಿಸಿದ್ದು ಭಾರಿ ಕುತೂಹಲ ಹೆಚ್ಚಿಸಿದೆ.
ಶತಾಯಗತಾಯ ಈ ಬಾರಿ ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾಯಿಸಬೇಕು ಎಂದು ನಿರ್ಧರಿಸಿದಂತಿರುವ ಬಳ್ಳಾರಿ ಗಣಿ ಧಣಿಗಳು ಹಾಗೂ ಇತರ ಮುಖಂಡರು ಕ್ಷಿಪ್ರ ರಾಜಕೀಯ ಕ್ರಾಂತಿ ನಡೆಸುವ ಧಾವಂತದಲ್ಲಿದ್ದಾರೆ. ಮುಖ್ಯಮಂತ್ರಿಗಳು ನೇರ ಮಾತುಕತೆ ನಡೆಸಲು ಆಹ್ವಾನಿಸಿದರೂ ರೆಡ್ಡಿ ಸಹೋದರರ ನಿರಾಕರಿಸಿರುವುದು ಬಿಕ್ಕಟ್ಟು ಮತ್ತಷ್ಟು ವಿಷಮಸ್ಥಿತಿ ತಲುಪಿರುವುದು ಸ್ಪಷ್ಟವಾಗಿದೆ. ಬಿಕ್ಕಟ್ಟು ಶಮನಕ್ಕೆ ಬಿಜೆಪಿ ಹಿರಿಯ ನಾಯಕ ಅರುಣ್ ಜೈಟ್ಲಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications