ಬೆಂಕಿಗೆ ತುಪ್ಪ ಸುರುವಿದ ಯಡಿಯೂರಪ್ಪ!

ಈ ಮೂಲಕ ರೆಡ್ಡಿ ಮತ್ತು ಯಡಿಯೂರಪ್ಪ ನಡುವೆ ಭಾರಿ ಕಂದಕ ನಿರ್ಮಾಣ ಆಗಿರುವುದು ಸಾಬೀತಾಗಿದೆ. ಅಶಿಸ್ತಿನ ನೆಪದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಬಿ ಶಿವಪ್ಪ, ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಅರಣ್ಯಾಧಿಕಾರಿ ಮುತ್ತಯ್ಯ ವರ್ಗಾವಣೆಗೊಂಡ ಅಧಿಕಾರಿಗಳಾಗಿದ್ದಾರೆ.
ಇವರ ಬದಲಿಗೆ ಹರ್ಷಾ ಗುಪ್ತಾ, ಡಿಸಿ ರಾಜಪ್ಪ ಮತ್ತು ಬಿಸ್ವಜಿತ್ ಮಿಶ್ರಾ ಅವರನ್ನು ಕ್ರಮವಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅರಣ್ಯಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಪ್ರದಾನ ಕಾರ್ಯದರ್ಶಿ ಪೆರುಮಾಳ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮದನ್ ಗೋಪಾಲ್ ಅವರನ್ನು ಅರೋಗ್ಯ ಇಲಾಖೆ ಪ್ರದಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications