ಸಿಎಂ ನಿವಾಸದಲ್ಲಿ ಸಿಎಂ ಬೆಂಬಲಿಗರ ಸಭೆ

Yeddyurappa
ಬೆಂಗಳೂರು, ಅ. 27 : ರೆಡ್ಡಿ, ಸಿಎಂ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ರೆಡ್ಡಿ ಬೆಂಬಲಿಗ ಸಚಿವರನ್ನು ಹೊರತುಪಡಿಸಿ ಉಳಿದ ಎಲ್ಲ ಸಚಿವರನ್ನು ಸಭೆ ಕರೆದಿದ್ದಾರೆ. ಇನ್ನೊಂದಡೆ ರೆಡ್ಡಿ ಸಹ ಇಂದು ಕೂಡಾ ತಮ್ಮ ಆಪ್ತರೊಂದಿಗೆ ಸಭೆ ಮುಂದುವರಿಸಿದ್ದು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇನ್ನೊಂದು ಸ್ಥಳದಲ್ಲಿ ಆವರು ಶಾಸಕರೊಂದಿಗೆ ಚರ್ಚೆಯಲ್ಲಿ ನಿರತರಾಗಿರುವುದು ರಾಜ್ಯ ರಾಜಕೀಯ ತೀವ್ರ ಕೋಲಾಹಲ ಹಂತ ಬಂದು ತಲುಪಿದೆ.

ಈ ಮಧ್ಯ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಬಂಡಾಯದಲ್ಲಿ ತೊಡಗಿರುವ ಸಚಿವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸುವವರು ಯಾರೇ ಆದರೂ ಅವರ ವಿರುದ್ದ ಕ್ರಮ ಕೈಗೊಳ್ಳುವುದು ಖಚಿತ ಎಂದು ರೆಡ್ಡಿ ಸಹೋದರರಿಗೆ ತಿರುಗೇಟು ನೀಡಿದ್ದಾರೆ.

ಸಚಿವರಾದ ಕೆ ಎಸ್ ಈಶ್ವರಪ್ಪ, ಸುರೇಶಕುಮಾರ್, ಕೃಷ್ಣ ಪಾಲೇಮಾರ್, ಬಸವರಾಜ ಬೊಮ್ಮಾಯಿ, ವಿ ಎಸ್ ಆಚಾರ್ಯ, ಸಿ ಎಂ ಉದಾಸಿ, ಅಶೋಕ್, ರಾಮಚಂದ್ರಗೌಡ, ಡಿ ಸುಧಾಕರ್,ಎಸ್ ಎ ರವೀಂದ್ರನಾಥ್, ವೆಂಕಟರಮಣಪ್ಪ, ಅರವಿಂದ ಲಿಂಬಾವಳಿ, ಹರತಾಳ್ ಹಾಲಪ್ಪ, ಶೋಭಾ ಕರಂದ್ಲಾಜೆ, ರೇವೂ ನಾಯಕ್ ಬೆಳಮಗಿ ಸೇರಿ 19 ಮಂದಿ ಸಚಿವರು, ರಾಜ್ಯಾಧ್ಯಕ್ಷ ಸದಾನಂದಗೌಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಶ್ರೀರಾಮುಲು ನಿವಾಸದಲ್ಲಿ ಜನಾರ್ದನರೆಡ್ಡಿ ನೇತೃತ್ವದಲ್ಲಿ ಸಭೆ ಸೇರಿದ್ದು, ಮುಂದಿನ ರಾಜಕೀಯ ಹಾದಿಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ರೆಡ್ಡಿ ಪರ 40 ಶಾಸಕರ ಇದ್ದಾರೆ ಎಂದು ಹೇಳಲಾಗಿದೆ. ರೇಣುಕಾಚಾರ್ಯ ಅವರ ನಿವಾಸದಲ್ಲಿ ಐವರು ಶಾಸಕರು ಸಭೆ ನಡೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+