ಒಂದೇ ದಿನದಲ್ಲಿ ತಿಮ್ಮಪ್ಪನಿಗೆ 28 ಲಕ್ಷ ಆದಾಯ

ನೂರು ರೂಪಾಯಿ ಬೆಲೆಯ ಮತ್ತು ಇನ್ನೂರು ರೂಪಾಯಿ ಬೆಲೆಯ 'ಅರ್ಚನಾನ೦ತರ ದರ್ಶನ' ಟಿಕೆಟ್ ಪದ್ದತಿಯನ್ನು ರದ್ದುಗೊಳಿಸಿ ಮುನ್ನೂರು ರೂಪಾಯಿ ಬೆಲೆಯ 'ಶೀಘ್ರ ದರ್ಶನ' ವ್ಯವಸ್ಥೆಯನ್ನು ಆಡಳಿತ ಮಂಡಳಿ ಆರಂಭಿಸಿತ್ತು. ಬುಧವಾರದ ದಿನ ಅಷ್ಟೇನೂ ಜನಜಂಗುಳಿ ಇಲ್ಲದಿದ್ದರೂ ಈ ಟಿಕೆಟ್ ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಈ ಟಿಕೆಟ್ ಅನ್ನು ಮೊದಲ ಐದು ಗಂಟೆಯಲ್ಲಿ ಆರು ಸಾವಿರ ಯಾತ್ರಾರ್ಥಿಗಳು ಪಡೆದುಕೊಂಡಿದ್ದರು.
ದರ್ಶನಕ್ಕೆ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಈ ಪದ್ಧತಿ ಜಾರಿಗೊಳಿಸಲಾಗಿದೆ. ಕೆಲವೊಂದು ವರ್ಗದ ಜನರಿಗೆ ಇದು ದುಬಾರಿ ಎನಿಸಿದರೂ ಒಟ್ಟಾರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಟಿಟಿಡಿ ಅಧ್ಯಕ್ಷ ಆದಿಕೇಶವಲು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications