ನೆರೆ : ಬಯೋಕಾನ್ ನಿಂದ 10 ಕೋಟಿ ನೆರವು
ಬೆಂಗಳೂರು,
ಅ. 22 : ನೆರೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ಐಟಿ ಕಂಪನಿಗಳು ನೆರವಾಗಬೇಕು ಎಂದು ಸರಕಾರ ಮಾಡಿಕೊಂಡ ಮನವಿಗೆ ಬಯೋಕಾನ್ ಕಂಪನಿ ಸ್ಪಂದಿಸಿದ್ದು, ಲಕ್ಷ ರುಪಾಯಿ ವೆಚ್ಚದಲ್ಲಿ 1000 ಮನೆಗಳ ನಿರ್ಮಾಣದ ವೆಚ್ಚವನ್ನು ಕಂಪನಿ ಭರಿಸುವುದಾಗಿ ಬಯೋಕಾನ್ ಮುಖ್ಯಸ್ಥ ಕಿರಣ್ ಮುಜಮ್ ದಾರ್ ಹೇಳಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನರು ವಸತಿಹೀನರಾಗಿದ್ದಾರೆ. ರೈತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಸಂಕಷ್ಟದ ಹೊತ್ತಿನಲ್ಲಿ ಸಂತ್ರಸ್ಥರ ಕೈಹಿಡಿಬೇಕಿರುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯೂ 10 ಕೋಟಿ ರುಪಾಯಿ ವೆಚ್ಚದಲ್ಲಿ ಲಕ್ಷ ರುಪಾಯಿಗೊಂದರಂತೆ 1000 ಮನೆಗಳನ್ನು ಕಟ್ಟಿಸಿಕೊಡಲು ತೀರ್ಮಾನಿಸಿದೆ. ಶೀಘ್ರದಲ್ಲಿ ನೆರೆಯ ಹಣವನ್ನು ಸರಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಮುಜಮ್ ದಾರ್ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications