ಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ : ರವಿ
ಬೆಂಗಳೂರು,
ಅ. 16 : ಆರ್ಎಸ್ ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕಾಂಗ್ರೆಸ್ಸಿಗರ ನಾಲಿಗೆಗೆ ಹುಳು ಬೀಳುತ್ತಿದೆ ಎಂದು ಬಿಜೆಪಿ ಶಾಸಕ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರೆ ಸಂತ್ರಸ್ಥರಿಗೆ ಆರ್ಎಸ್ಎಸ್ ಮೂಲಕ ದೇಣಿಗೆ ನೀಡುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ಹಣ ದುರುಪಯೋಗವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪರಿಹಾರ ವಿತರಿಸುವಲ್ಲಿ ಪಕ್ಷ ಮತ್ತು ಜಾತಿ ರಾಜಕಾರಣ ನಡೆಯುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿಕೆ ಬಗ್ಗೆಯೂ ಕಿಡಿಕಾರಿದರು. ಇದು ಆಧಾರ ರಹಿತ ಮತ್ತು ಕಪೋಲಕಲ್ಪಿತ ಆರೋಪ ಎಂದರು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಅನುಭವ ಕಾಂಗ್ರೆಸ್ಸಿಗರಿಗೇ ಹೆಚ್ಚಾಗಿದೆ. ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲವಾದರೆ, ಶ್ರೀಮಂತರಾದ ದೇಶಪಾಂಡೆಯವರೇ ಅನುಕೂಲ ಮಾಡಿಕೊಡಲಿ ಎಂದು ಸವಾಲು ಹಾಕಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications