ನಕ್ಸಲ್ ಮುಖಂಡನಾದ ಕೃಷಿ ವಿಜ್ಞಾನಿ

ಇತ್ತೀಚೆಗೆ ಅಲ್ಲಿನ ಪೊಲೀಸರು ನಕ್ಸಲರು ಎಂಬ ಆರೋಪದ ಮೇಲೆ ದಂಪತಿಗಳನ್ನು ಬಂಧಿಸಿದ್ದಾರೆ. ಅವರ ಹೆಸರು ರವಿ ಶರ್ಮಾ ಮತ್ತು ಬಿ ಅನುರಾಧಾ. ರವಿ ಶರ್ಮಾ ವೃತ್ತಿಯಿಂದ ಕೃಷಿ ವಿಜ್ಞಾನಿ, ಪ್ರವೃತ್ತಿಯಿಂದ ನಕ್ಸಲ್ ಸಂಘಟನೆಯ ಮಾರ್ಗದರ್ಶಕರು. ರವಿ ಶರ್ಮಾ ಮಾವೋವಾದಿಗಳ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯರೂ ಹೌದು.
ವಿಜ್ಞಾನಿ ರವಿ ಶರ್ಮಾ ಅವರಿಗೆ ಅರ್ಜುನ್ ಅಲಿಯಾಸ್ ಮಹೇಶ್ ಅಲಿಯಾಸ್ ಅಶೋಕ್ ಎಂಬ ಹೆಸರುಗಳಿವೆ. ಅನುರಾಧಾ ಅವರ ಮೂಲ ಹೆಸರು ರಂಜಿತಾ. 1999ರಿಂದ ಅವರು ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಹಜಾರಿಭಾಗ್ ಎಸ್ಪಿ ಪಂಕಜ್ ಕಂಬೋಜಿ ತಿಳಿಸಿದ್ದಾರೆ. ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕೋಬಾದ್ ಗ್ಯಾಂಡಿ ಕೂಡಾ ಶ್ರೀಮಂತ ಕುಟುಂಬದಿಂದ ಬಂದವರು. ಸ್ನಾತಕೋತ್ತರ ಪದವೀಧರ ಎಂಬುದು ವಿಶೇಷವಾಗಿದೆ.
(ಏಜನ್ಸೀಸ್)












Click it and Unblock the Notifications