ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಸಾವಿರ ಕೋಟಿ ನೆರವಿಗೆ ವೆಂಕಯ್ಯ ಆಗ್ರಹ

|
Google Oneindia Kannada News

Venkaiah urges Centre to grant more aid to Karnataka
ಬೆಂಗಳೂರು, ಅ.10: ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಕ್ಕೆ ಘೋಷಿಸಿರುವ ರು.1 ಸಾವಿರ ಕೋಟಿ ತುರ್ತು ನೆರೆಪರಿಹಾರ ಸಾಕಾಗುವುದಿಲ್ಲ. ಕನಿಷ್ಠ ರು.5 ಸಾವಿರ ಕೋಟಿ ಘೋಷಿಸುವಂತೆ ಬಿಜೆಪಿಯ ಹಿರಿಯ ಮುಖಂಡ ಎಂ ವೆಂಕಯ್ಯನಾಯ್ಡು ಆಗ್ರಹಿಸಿದ್ದಾರೆ.

ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಪ್ರವಾಹ ಸಮೀಕ್ಷೆಗೆ ತಡವಾಗಿಯಾದರೂ ಪ್ರಧಾನಿ ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ. ಅವರು ಪ್ರಕಟಿಸಿರುವ ತಾತ್ಕಾಲಿಕ ನೆರವು ಸಾಕಾಗುವುದಿಲ್ಲ. ನೆರೆಪೀಡಿತ ಪ್ರದೇಶಗಳು ಮಾಮೂಲಿ ಸ್ಥಿತಿಗೆ ಬರಲು ಕನಿಷ್ಠ 10 ತಿಂಗಳ ಕಾಲ ಬೇಕಾಗುತ್ತದೆ.ಇಂತಹ ಭೀಕರ ಪರಿಸ್ಥಿತಿ ನಿರ್ವಹಣೆಗೆ ಪ್ರಾಥಮಿಕ ಹಂತವಾಗಿ ಕನಿಷ್ಠ ರು.5 ಸಾವಿರ ಕೋಟಿ ಪ್ರಕಟಿಸುವಂತೆ ವೆಂಕಯ್ಯ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.

ಸಂತ್ರಸ್ತರ ನೆರವಿಗಾಗಿ ಈಗಾಗಲೇ ತಮ್ಮ ವೇತನದಲ್ಲಿ ರು.1 ಲಕ್ಷ ದೇಣಿಗೆಯಾಗಿ ನೀಡಿದ್ದೇವೆ. ಸಂಸದರ ನಿಧಿಯಿಂದ ಸಂತ್ರಸ್ತರಿಗೆ ರು.1 ಕೋಟಿ ನೆರವು ನೀಡುವುದಾಗಿ ವೆಂಕಯ್ಯ ತಿಳಿಸಿದರು. ಪುನರ್ವಸತಿ ಕಲ್ಪಿಸಲು ರಾಜ್ಯದ ಮೇಲೆ ಸಂಪೂರ್ಣ ಹೊಣೆಹೊರಿಸುವುದು ಸರಿಯಲ್ಲ. ರಾಜ್ಯ ಸರಕಾರದ ಬಳಿ ಸಂಪನ್ಮೂಲದ ಕೊರತೆ ಇದೆ. ಕೇಂದ್ರ ಸರಕಾರ ನೆರವಿನ ಹಸ್ತ ಚಾಚಬೇಕು ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X