ಟಿಸಿಎಸ್ ನ ಸಿಇಒ ಹುದ್ದೆ ತೊರೆದ ರಾಮದೊರೈ
ಮುಂಬೈ,
ಅ.7: ಭಾರತದ ಅಗ್ರಗಣ್ಯ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ರಾಮದೊರೈ ಅವರು ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ.ಟಿಸಿಎಸ್ ಸಂಸ್ಥೆಯ ಸಿಒಒ ಹಾಗೂನಿರ್ವಹಣಾ ನಿರ್ದೇಶಕರಾದ ಎನ್ ಚಂದ್ರಶೇಖರನ್ ಅವರು ರಾಮದೊರೈ ಅವರ ಸ್ಥಾನವನ್ನು ತುಂಬಲಿದ್ದಾರೆ. id="toptextpromo">ಭಾರತ
ಸಾಫ್ಟ್ ವೇರ್ ರಫ್ತು ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಯಲ್ಲಿ ಸುಮಾರು 13 ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎಸ್ ರಾಮದೊರೈ ಕರ್ತವ್ಯ ನಿರ್ವಹಿಸಿದ್ದರು.ಸದ್ಯ ಕಂಪೆನಿಯ ಮೌಲ್ಯ ಸುಮಾರು 6 ಕೋಟಿ ಡಾಲರ್ ಗೂ ಅಧಿಕ ಎಂಬ ಅಂದಾಜಿದೆ. ಸಿಇಒ ಹುದ್ದೆಯಿಂದ ಕೆಳಗಿಳಿದರೂ ರಾಮದೊರೈ ಅವರು, ಟಿಸಿಎಸ್ ನ ವೈಸ್ ಚೇರ್ ಮನ್ ಆಗಿ ಮುಂದುವರೆಯಲಿದ್ದಾರೆ ಎಂದು ಕಂಪೆನಿ ಪ್ರಕಟಣೆಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications