ದತ್ತಪೀಠ ದುರಸ್ತಿಗೆ ಮಧ್ಯಂತರ ತಡೆ
ಬೆಂಗಳೂರು,
ಅ. 7 : ಚಿಕ್ಕಮಗಳೂರಿನ ದತ್ತಪೀಠದ ದುರಸ್ತಿಗೆ ಹೈಕೋರ್ಟ್ ಮಧ್ಯಂತರ ತಡಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನಕರನ್ ಮತ್ತು ಶಾಂತನಗೌಡರ್ ಅವರ ವಿಭಾಗಿಯ ಪೀಠ ಶುಕ್ರವಾರ ಈ ಆದೇಶ ನೀಡಿದೆ. id="toptextpromo">ಚಂದ್ರದ್ರೋಣ
ಬೆಟ್ಟದ ಸಾಲಿನಲ್ಲಿರುವ ದತ್ತ ಪೀಠ ಇತ್ತೀಚೆಗೆ ಕುಸಿದಿತ್ತು. ಕಾಮಗಾರಿ ನಡೆಯುತ್ತಿತ್ತು. ಇದಲ್ಲದೆ ದತ್ತ ಪೀಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಶಾಸಕ ಸಿ ಟಿ ರವಿ ಮತ್ತಿತರರು ಧಾರ್ಮಿಕ ವಿಧಿವಿಧಾನ ನೆರವೇರಿಸಿದ್ದರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಆದೇಶವಿದ್ದರೂ ಪೂಜೆ ಸಲ್ಲಿಸಿ, ಕಾಮಗಾರಿ ನಡೆಸಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಪೀಠವು ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications