ಪ್ರೆಸ್ ಕ್ಲಬ್ ಚುನಾವಣೆ;ಎಂ ಎ ಪೊನ್ನಪ್ಪ ಅಧ್ಯಕ್ಷ

ಇಂದು ಬೆಳಗ್ಗೆ ಪ್ರೆಸ್ ಕ್ಲಬ್ಬಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಂಎ ಪೊನ್ನಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಲಿ ಅಧ್ಯಕ್ಷ ಇ ವಿ ಸತ್ಯನಾರಾಯಣ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ರಾಮಕೃಷ್ಣ ಉಪಾಧ್ಯ ಅವರನ್ನು ಸೋಲಿಸುವ ಮೂಲಕ ವಿಜಯ ಪತಾಕೆ ಹಾರಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉದಯ್ ಟಿವಿಯ ಆರ್ ಶ್ರೀಧರ್ ಅವರು ಹತ್ತಿರದ ಪ್ರತಿಸ್ಪರ್ಧಿ ಕೆಎಸ್ ಜಯರಾಮ್ ಮತ್ತು ಕೃಷ್ಣಪ್ಪ ಆರ್ (ಪಾವಗಡ) ಅವರನ್ನು ಸೋಲಿಸಿ ಜಯಶಾಲಿಯಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಲನಚಿತ್ರ ವರದಿಗಾರ ಸದಾಶಿವ ಶೆಣೈ ಅವರು ಉದಯ್ ಟಿವಿ ವರದಿಗಾರ ಬಿಎಸ್ ಸತ್ಯನಾರಾಯಣ ಹಾಗೂ ಹೊಸದಿಗಂತ ಪತ್ರಿಕೆಯ ಶಾಂತಾರಾಮ್ ಅವರನ್ನು ಸೋಲಿಸಿ ವಿಜಯದ ನಗೆ ಬೀರಿದರು. ಕಾರ್ಯದರ್ಶಿಯಾಗಿ ದೊಡ್ಡಬೊಮ್ಮಯ್ಯ ಆಯ್ಕೆಯಾದರು ಹಾಗೂ ಖಜಾಂಚಿಯಾಗಿ ಕೆಎಸ್ ಸೋಮಶೇಖರ್ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಶಾಂತಮ್ಮ, ಲೋಕೇಶ್ ಕಾಯರ್ಗ, ದಿನೇಶಕುಮಾರ್, ಎಸ್ ಈಶ್ವರ್, ಬಿ ಎನ್ ರಮೇಶ್, ಆಲ್‌ಫ್ರೆಡ್ ಟೆನಿಸನ್ ಡಿ ಅಯ್ಕೆಯಾಗಿದ್ದಾರೆ. ಪ್ರೆಸ್ ಕಬ್ಬಿನ ಸದಸ್ಯಬಲ 1,070. ಅರ್ಹ ಮತದಾರರ ಸಂಖ್ಯೆ 602. ಎಲೆಕ್ಟ್ರಾನಿಕ್ ಮತದಾನ ಭಾನುವಾರ ಬೆಳಗ್ಗೆ 9ರಿಂದ 2 ಗಂಟೆವರೆಗೆ ನಡೆಯಿತು.
ಚುನಾವಣಾ ಅಧಿಕಾರಿ ಬಿ.ಎನ್. ಗುರುಮೂರ್ತಿ ಕಾರ್ಯ ನಿರ್ವಹಿಸಿದರು. ಕ್ಲಬ್ಬಿನ ಪದಾಧಿಕಾರಿ ಆಗಬಯಸುವ ಆಕಾಂಕ್ಷಿಗಳ ಪಟ್ಟಿ ಈ ಬಾರಿ ಹನುಮಂತನ ಬಾಲದಂತೆ ಬೆಳೆದಿತ್ತು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಚಾಂಜಿ ಹಾಗೂ ಆಡಳಿತ ಸಮಿತಿಯ 6
ಸ್ಥಾನಗಳು ಸೇರಿದಂತೆ ಒಟ್ಟು 11 ಹುದ್ದೆಗಳಿಗೆ 40 ಮಂದಿ ಹುರಿಯಾಳುಗಳು ಅಖಾಡದಲ್ಲಿದ್ದರು.
ಎಂ ಎ ಪೊನ್ನಪ್ಪ (ಅಧ್ಯಕ್ಷ)
ಶ್ರೀಧರ್ (ಉಪಾಧ್ಯಕ್ಷ)
ಸದಾಶಿವ ಶಣೈ (ಪ್ರಧಾನ ಕಾರ್ಯದರ್ಶಿ)
ದೊಡ್ಡಬೊಮ್ಮಯ್ಯ (ಕಾರ್ಯದರ್ಶಿ)
ಕೆಎಸ್ ಸೋಮಶೇಖರ್ (ಖಜಾಂಚಿ)
ಕಾರ್ಯಕಾರಿ ಸಮಿತಿ ಸದಸ್ಯರು
ಶಾಂತಮ್ಮ
ಲೋಕೇಶ್ ಕಾಯರ್ಗ
ಎಸ್ ಈಶ್ವರ್
ಬಿ ಎನ್ ರಮೇಶ್
ಆಲ್ ಫ್ರೇಡ್ ಟೆನಿಸನ್ ಡಿ
ದಿನೇಶಕುಮಾರ್
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications