ಮೋದಿ ನೀತಿಪಾಠ : ಜೆಡಿಎಸ್ ಕಟು ಟೀಕೆ

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಸಚಿವರುಗಳು ಅಧಿಕಾರಕ್ಕೆ ಬಂದು ಒಂದು ವರ್ಷದ ನಂತರ ಮೋದಿ ಅವರಿಂದ ನೀತಿಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳು ಅನುಭವವಿಲ್ಲದೇ ಅಧಿಕಾರ ನಡೆಸಿದ್ದಾರೆನ್ನುವ ಅನುಮಾನ ಕಾಡುತ್ತಿದೆ ಅಥವಾ ಯಡಿಯೂರಪ್ಪ ದಡ್ದರಾಗಿರಬಹುದು ಎಂದು ದತ್ತಾ ಲೇವಡಿ ಮಾಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟ ಸಭೆ ಟೂರಿಂಗ ಟಾಕೀಸ್ ತರ ಆಗಿ ತನ್ನ ಪಾವಿತ್ರ್ಯತೆ ಕಳೆದುಕೊಂಡಿದೆ. ಬಿಜೆಪಿಯ ಚಿಂತನಾಸಭೆ ಆರ್ ಎಸ್ ಎಸ್ ಬೈಠಕ್ ಆಗಿದೆ. ಬಿಜೆಪಿ ಸರಕಾರದ ಜನವಿರೋಧಿ ಖಂಡಿಸಿ ಅಕ್ಟೋಬರ್ 7ರಿಂದ 11ರ ವರೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ದತ್ತಾ ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications