ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಕೇಂದ್ರ ಆಸಕ್ತಿ : ಮೊಯ್ಲಿ

By Staff
|
Google Oneindia Kannada News

Veerappa Moily
ಬೆಂಗಳೂರು, ಸೆ. 30 : ನ್ಯಾಯಾಲಯದಲ್ಲಿ ವಿಲೇವಾರಿ ಆಗದೆ ಉಳಿದಿರುವ ಪ್ರಕರಣ ವಿಚಾರಣೆ ನಡೆಸಲು ಗ್ರಾಮಕ್ಕೊಂದು ನ್ಯಾಯಾಲಯ ಸ್ಥಾಪನೆ ಮಾಡುವ ಚಿಂತನೆಯನ್ನು ಕೇಂದ್ರ ಸರಕಾರದ ನಡೆಸಿದೆ ಎಂದು ಕೇಂದ್ರದ ಕಾನೂನು ಖಾತೆ ಸಚಿವ ಎಂ ವೀರಪ್ಪ ಮೊಯ್ಲಿ ಹೇಳಿದರು.

ನಗರದಲ್ಲಿ ಏರ್ಪಡಿಸಲಾಗಿದ್ದ ಭಾರತದಲ್ಲಿ ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಎಂಬ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 5000 ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದರು.

ಈ ಕುರಿತು ಕೇಂದ್ರ ಸರಕಾರದ ಅಧಿಕೃತ ನೋಟಿಸ್ ಜಾರಿಗೊಳಿಸಲಾಗಿದ್ದು, ಅಕ್ಟೋಬರ್ 2 ರಂದು 200 ಗ್ರಾಮ ನ್ಯಾಯಾಲಗಳಿಗೆ ಚಾಲನೆ ನೀಡಲಾಗುವುದು. ಅದಕ್ಕಾಗಿ 50 ಕೋಟಿ ರುಪಾಯಿಗಳ ಹೆಚ್ಚುವರಿ ಹಣ ನೀಡುವಂತೆ ಯೋಜನಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮೋಯ್ಲಿ ವಿವರಿಸಿದರು. ನವೆಂಬರ್-ಡಿಸೆಂಬರ್ ಹೊತ್ತಿಗೆ ಸುಮಾರು 400 ಗ್ರಾಮ ನ್ಯಾಯಾಲಯಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಗ್ರಾಮ ನ್ಯಾಯಾಲಯ ನಿರ್ಮಾಣ ಯುಪಿಎ ಸರಕಾರದ ಕನಸಿನ ಕೂಸು. ದೇಶದಲ್ಲಿ ವಿಲೇವಾರಿ ಆಗದೆ ಸುಮಾರು 3.65 ಕೋಟಿ ಪ್ರಕರಣ ಹಾಗೆ ಉಳಿದುಕೊಂಡಿವೆ. ಗ್ರಾಮ ನ್ಯಾಯಾಲಯ ಸ್ಥಾಪನೆಯಿಂದಾಗಿ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ ಎಂದು ಮೊಯ್ಲಿ ಸಮರ್ಥಿಸಿಕೊಂಡರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X