ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತೂರಿನಲ್ಲಿ ಸಚಿವರಿಗೆ ಪ್ರೈವೇಟ್ ಟ್ಯೂಷನ್ ಆರಂಭ

By Staff
|
Google Oneindia Kannada News

Chintna baithak in Suttur math
ಸುತ್ತೂರು. ಸೆ. 29 : ಮೂರು ದಿನಗಳ ಬಿಜೆಪಿ ಚಿಂತನ ಮಂಥನಾ ಕಾರ್ಯಕ್ರಮಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೀಪ ಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ಸುಸೂತ್ರ ಆಡಳಿತ ಮತ್ತು ವಿಕಾಸದ ಹೆಜ್ಜೆಗಳು ಎಂಬ ಹೆಸರಿನಡಿ ರಾಜ್ಯ ಅಭಿವೃದ್ಧಿ ಕುರಿತು ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಪುಟದ ಎಲ್ಲ ಸಹದ್ಯೋಗಿಗಳು ಭಾಗವಹಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ಹಿರಿಯ ನಾಯಕ ಅನಂತಕುಮಾರ್, ವಕ್ತಾರ ಧನಂಜಯ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದಗೌಡ ಕಾರ್ಯಕ್ರಮದಲ್ಲಿ ಒಂದೊಂದು ವಿಷಯ ಕುರಿತಂತೆ ಉಪನ್ಯಾಸ ನೀಡಲಿದ್ದಾರೆ. ಆದರೆ ಧಾರ್ಮಿಕ ಕೇಂದ್ರ ಸುತ್ತೂರು ಮಠದಲ್ಲಿ ಬಿಜೆಪಿ ಸರಕಾರ ಚಿಂತನೆ ಮಂಥನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕಾಂಗ್ರೆಸ್ ಟೀಕೆ

ಅನನುಭವಿಗಳ ಕೈಗೆ ರಾಜ್ಯದ ಅಧಿಕಾರ ಕೊಟ್ಟಿದ್ದು ದೊಡ್ಡ ದುರಂತ ಎಂದು ಕಾಂಗ್ರೆಸ್ ಟೀಕಿಸಿದೆ. ಕಳೆದ ಮೂರು ವರ್ಷಗಳಿಂದ ಅನುಭವವಿಲ್ಲದೆ ರಾಜ್ಯದ ಆಡಳಿತ ನಡೆಸಿದ ಸರಕಾರ ರಾಜ್ಯವನ್ನು ಕತ್ತಲೆಗೆ ತಳ್ಳಿದೆ. ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಅಭಿವೃದ್ಧಿ ಹೇಗಾಗಿದೆ ಎಂಬುದಕ್ಕೆ ಇದರಿಂದ ಗೊತ್ತಾಗುತ್ತದೆ. ಇಂತವರ ಕೈಗೆ ರಾಜ್ಯದ ಅಧಿಕಾರವನ್ನು ಕೊಟ್ಟಿದ್ದು ದೊಡ್ಡ ದುರಂತ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಟೀಕಿಸಿದ್ದಾರೆ.

ಬಿಜೆಪಿ ಸರಕಾರ ರಾಜ್ಯಕ್ಕೆ ಮಾಡಿದ್ದೇನು ? ಒಬ್ಬ ಬಡವನಿಗೆ ನಿವೇಶನವಿಲ್ಲ. ಸೂರು ಕಲ್ಪಿಸಿಲ್ಲ. ಪಡಿತರ ಚೀಟಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿಪಕ್ಷದವರು ನಡೆಸುವ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ವಿಧಾನಸೌಧ ದಿಗ್ಬಂಧನ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ ಎಂದು ಅವರು ಕಿಡಿಕಾರಿದರು.

ಕುಮಾರಸ್ವಾಮಿ ಲೇವಡಿ

ಸುತ್ತೂರು ಮಠದಲ್ಲಿ ಬಿಜೆಪಿಯ ಚಿಂತನಾ ಸಭೆಯಲ್ಲಿ ತೀವ್ರವಾಗಿ ಲೇವಡಿ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕೋಮುವಾದ ಪ್ರವಚನ ಮಾಡಲಿಕ್ಕೆ ಚಿಂತನೆ ಸಭೆಯನ್ನು ಆಯೋಜಿಸಲಾಗಿದೆ ಎಂದಿದ್ದಾರೆ. ಗುಜರಾತ್ ನರಮೇಧ ನಡೆಸಿ ಕುಖ್ಯಾತಿ ಗಳಿಸಿರುವ ನರೇಂದ್ರ ಮೋದಿ ಅವರಿಂದ ಪ್ರವಚನ ಪಡೆಯುತ್ತಿರುವ ರಾಜ್ಯ ಸರಕಾರ ಎಂತಹ ಅಭಿವೃದ್ಧಿ ಕಾಣಲಿದೆ ಎನ್ನುವುದು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X