ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂದಿಜ್ವರ : ದೇಶಾದ್ಯಂತ 89 ಬಲಿ

By Staff
|
Google Oneindia Kannada News

Swine flu
ಮುಂಬೈ/ ನವದೆಹಲಿ, ಆ. 28 : ದೇಶದಲ್ಲಿ ಹಂದಿಜ್ವರದ ಹಾವಳಿ ನಿರಾತಂಕವಾಗಿ ಮುಂದುವರಿದಿದ್ದು, ಈ ಮಧ್ಯೆ ಇಂದು ಮುಂಬೈನ 39 ವಯಸ್ಸಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ ಮಾರಿಗೆ ಕುಣಿತಕ್ಕೆ 89 ಮಂದಿ ಮೃತಪಟ್ಟಂತಾಗಿದೆ.

ಎಂ ಶೇಕ್ (39 ) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ 10 ದಿನಗಳ ಹಿಂದೆಯೇ ಇವರಿಗೆ ಎಚ್ 1ಎನ್1 ಸೋಂಕಿರುವುದು ದೃಡಪಟ್ಟಿತ್ತು. ನಗರದ ನಾವಿ ಮುಂಬೈನಲ್ಲಿರುವ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ದಿನದಿಂದ ದಿನಕ್ಕೆ ಆವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದ್ದರಿಂದ ಡಿ ವೈ ಪಾಟೀಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಶೇಕ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ತಿಳಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ 89 ಜನರು ಹಂದಿಜ್ವರಕ್ಕೆ ಪ್ರಾಣ ಕಳೆದುಕೊಂಡಂತಾಯಿತು.

ಹಂದಿಜ್ವರಕ್ಕೆ ಮಹಾರಾಷ್ಟ್ರದಲ್ಲಿ 47 ಮಂದಿ ಸಾವನ್ನಪ್ಪಿದ್ದು. ಇದರಲ್ಲಿ ಪುಣೆಯೊಂದರಲ್ಲೇ 25, ಮುಂಬೈನಲ್ಲಿ 10, ನಾಶಿಕ್ ನಲ್ಲಿ 7, ಔರಂಗಾಬಾದ್ 2 ಮತ್ತು ದುಲೆ ಮತ್ತು ಲಾತೂರ್ ನಲ್ಲಿ ಒಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ. ನಂತರದ ಸ್ಥಾನ ಕರ್ನಾಟಕಕ್ಕೆ ಸೇರಿದ್ದು. ಈವರೆಗೂ ಈ ಮಾರಿಗೆ 20 ಮಂದಿ ಜೀವತೆತ್ತಿದ್ದಾರೆ. ಗುಜರಾತ್ ನಲ್ಲಿ 7, ತಮಿಳುನಾಡು, ಚಂಢೀಗಡ್ ಮತ್ತು ದೆಹಲಿಯಲ್ಲಿ ತಲಾ ಮೂವರು ಸಾವನ್ನಪ್ಪಿದ್ದಾರೆ. ಉತ್ತರಖಂಡದಲ್ಲಿ ಇಬ್ಬರು ಮತ್ತು ಕೇರಳ, ಗೋವಾ, ರಾಜಸ್ಥಾನ ಮತ್ತು ಹರಿಯಾಣಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಗುರುವಾರ ಆಸ್ಪತ್ರೆ ದಾಖಲಾಗಿರುವ ಜನರಲ್ಲಿ 123 ಮಂದಿಯಲ್ಲಿ ಈ ಮಾರಕ ವೈರಾಣು ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ವರೆಗೂ ದೇಶದಲ್ಲಿ 3,396 ಮಂದಿಯಲ್ಲಿ ಈ ಸೋಂಕಿ ಪತ್ತೆಯಾಗಿತ್ತು. ಆರೋಗ್ಯ ಇಲಾಖೆಯ ಮೂಲಗಳು ಪ್ರಕಾರ ಈ ಸೋಂಕು 14 ರಿಂದ 44 ವಯೋಮಾನದವರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಸತ್ತವರಲ್ಲಿ ಇದೇ ವಯಸ್ಸಿನವರೇ ಹೆಚ್ಚಿನ ಜನ ಎಂದು ಸ್ಪಷ್ಪಪಡಿಸಿದೆ. ಜೊತೆಗೆ ಸರಿಯಾದ ಚಿಕಿತ್ಸೆ ದೊರೆಯದೇ ಅನೇಕರು ಸಾವನ್ನಪ್ಪಿದ್ದಾರೆ ಎಂದು ಸಹ ತಿಳಿಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X